ಅಸ್ಸಾಂ: ಗರ್ಭಿಣಿಯೋರ್ವಳು ಹೊಟ್ಟೆ ನೋವೆಂದು ಆಸ್ಪತ್ರೆ ಬಂದಿದ್ದ ವೇಳೆ, ಹೆರಿಗೆಗೆ ಮೂರು ತಿಂಗಳ ಅವಧಿ ಇರುವಾಗಲೇ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಗರ್ಭಿಣಿಯು ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದರು, ಈ ವೇಳೆ ವೈದ್ಯನೊಬ್ಬ ಸಿಸೇರಿಯನ್ ನಡೆಸಿದ್ದಾನೆ. ಬಳಿಕ ಮಗುವಿನ ಬೆಳವಣಿಗೆಯಾಗಿಲ್ಲವೆಂದು ಮತ್ತೆ ಹೊಲಿಗೆ ಹಾಕಿ ಬೇಜಾವಾಬ್ದಾರಿ ತೋರಿ ಪ್ರಾಣದೊಂದಿಗೆ ಚೆಲ್ಲಾಟವಾಡಿದ್ದಾನೆ.
ಕರೀಂಗಂಜ್ ಸಿವಿಲ್ ಆಸ್ಪತ್ರೆಯ ವೈದ್ಯ ಡಾ. ಎ ಕೆ ಬಿಸ್ವಾಸ್ ಗೊತ್ತು ಗುರಿಯಿಲ್ಲದೇ ಶಸ್ತ್ರಚಿಕಿತ್ಸೆ ನಡೆಸಿದ್ದು, ಬಳಿಕ ಗರ್ಭಿಣಿಯನ್ನು ಸುಮಾರು 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ನಂತರ ಆಗಸ್ಟ್ 31 ರಂದು ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಸೂಕ್ಷ್ಮ ವಿಚಾರ ಪಾಕ್ ಉಗ್ರರೊಂದಿಗೆ ಹಂಚಿಕೊಂಡ ಮೌಲ್ವಿಯ ಬಂಧನ
ಆಸ್ಪತ್ರೆ ಮುಂಭಾಗ ವೈದ್ಯರ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆ ಕುರಿತು ವೈದ್ಯರು ಹಾಗೂ ಗರ್ಭಿಣಿಯ ಕುಟುಂಬದವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.