ಚಿಂತಾಮಣಿ(ಚಿಕ್ಕಬಳ್ಳಾಪುರ): ಉಳಿತಾಯ ಚೀಟಿ ಹೆಸರಲ್ಲಿ ಅಸ್ಸಾಂ ಮೂಲದ ದಂಪತಿಯಿಂದ ಕೋಟ್ಯಾಂತರ ರು, ಹಣ ಸಂಗ್ರಹಿಸಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದ್ದು ಉಳಿತಾಯ ಚೀಟಿ ಹೆಸರಲ್ಲಿ ಹಣ ಕಳೆದುಕೊಂಡವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಾರ್ವಜನಿಕರಿಂದ ಉಳಿತಾಯ ಚೀಟಿ ಹೆಸರಲ್ಲಿ ಕೋಟ್ಯಂತರ ರೂ., ಹಣ ಸಂಗ್ರಹಿಸಿ ಸದಸ್ಯ ಎಸ್ಕೇಪ್ ಆಗಿರುವ ಅಸ್ಸಾಂ ಮೂಲದ ದಂಪತಿಯನ್ನು ಪಪ್ಪಿಸಿಂಗ್ ಕೊಂ ಬಪ್ಪಿಸಿಂಗ್ ( 38) ಹಾಗೂ ಅವರ ಗಂಡ ಬೊಪ್ಪಿಸಿಂಗ್ ಬಿನ್ ರಂಜೀತ್ ಸಿಂಗ್ ಎಂದು ಗುರುತಿಸಲಾಗಿದೆ.
4 ವರ್ಷಗಳ ಹಿಂದೆ ನಗರದ ಕನ್ನಂಪಲ್ಲಿ ನಿವಾಸಿ ಕೆ.ಎಚ್.ಚಂದ್ರಶೇಖರ್ ಬಿನ್ ಲೇಟ್ ಅಂಜಪ್ಪ ಎಂಬುವರ ಮನೆ ಬಾಡಿಗೆ ಪಡೆದಿದ್ದ ಈ ದಂಪತಿ, ನಗರದ ಹೊರ ವಲಯದ ಬೆಂಗಳೂರು ರಸ್ತೆಯಲ್ಲಿರುವ ಕಟಮಾಚನಹಳ್ಳಿ ಕ್ರಾಸ್ ಬಳಿ ಇರುವ ಅರ್ಕೇಡ್ ಎಂಬ ಪ್ಲೇವುಡ್ ಶೀಟ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ನಂತರ ಚಂದ್ರಶೇಖರ್‌ಗೆ ಸೇರಿದ ಕನ್ನಂಪಲ್ಲಿ ಸರ್ಕಲ್ ನಲ್ಲಿ ಅಂಗಡಿ ಮಳಿಗೆಗಳು ಬಾಡಿಗೆಗೆ ಪಡೆದು ದಿನಸಿ ವ್ಯಾಪಾರ ನಡೆಸುತ್ತಿದ್ದರು.
ಈ ವೇಳೆ ಸಣ್ಣಪುಟ್ಟ ಹಣಕಾಸಿನ ವ್ಯವಹಾರ ಮತ್ತು ಪಟಾಕಿ, ಹಾಗೂ ಇತರೆ ಚೀಟಿ ವ್ಯವಹಾರಗಳನ್ನು ಮಾಡಲು ಪ್ರಾರಂಬಿಸಿದ ಅಸ್ಸಾಂ ಮೂಲದ ದಂಪತಿಗಳು, ಪ್ರತಿ ತಿಂಗಳು ಕನಿಷ್ಠ 500, 1000, 2000. 5000, 10.000 ರೂಗಳನ್ನು 12 ತಿಂಗಳ ಕಾಲ ಕಟ್ಟುವಂತೆ ನಂತರ ವರಲಕ್ಷ್ಮೀ ಹಬ್ಬದ ತಿಂಗಳಲ್ಲಿ ಗ್ರಾಹಕರ ಕಟ್ಟುವ ಹಣಕ್ಕೆ 12,000 ಕ್ಕೆ ವಾರ್ಷಿಕ 3,000 ರೂಗಳನ್ನು ಸೇರಿಸಿ 15,000 ರೂಗಳನ್ನು ವಾಪಸ್ಸುಕೊಡುವುದಾಗಿ ನಂಬಿಸಿ ಗ್ರಾಹಕರು ಕಟ್ಟುವ ಹಣಕ್ಕೆ ತಕ್ಕಂತೆ ಅಧಿಕ ಹಣವನ್ನು ಹಾಕಿಕೊಡುವುದಾಗಿ ನಂಬಿಸಿ ಅದರಂತೆ ಒಟ್ಟು 39 ಮಂದಿ ಬಳಿ ಲಕ್ಷಾಂತರ ರು, ಹಣ ಹೂಡಿಕೆ ಮಾಡಿಸಿಕೊಂಡ ದಂಪತಿ ಒಟ್ಟು 3,26,94,500 ರು, ಸಂಗ್ರಹಿಸಿಕೊಂಡು ಕಳೆದ ಕಳೆದ 20 ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆಂದು ಮನೆ ಬಾಡಿಗೆ ನೀಡಿದ್ದ ಚಂದ್ರಶೇಖರ್ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.