Advertisement

ಪಾಕಿಸ್ತಾನ, ಬಾಂಗ್ಲಾದೇಶವನ್ನು ಜೋಡಿಸಿ: ಕಾಂಗ್ರೆಸ್ ಗೆ ಹಿಮಂತ ಬಿಸ್ವಾ ಶರ್ಮಾ ಸವಾಲು

02:25 PM Sep 07, 2022 | Team Udayavani |

ದಿಸ್ಪುರ್: ‘‘ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶವನ್ನು ಸಂಯೋಜಿಸಲು ಪ್ರಯತ್ನಿಸಿ ಮತ್ತು ಅಖಂಡ ಭಾರತಕ್ಕಾಗಿ ಕೆಲಸ ಮಾಡಿ” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಭಾರತ ಅಖಂಡವಾಗಿದ್ದು, ನಾವು ಒಂದು ರಾಷ್ಟ್ರ. ಕಾಂಗ್ರೆಸ್ 1947 ರಲ್ಲಿ ಭಾರತವನ್ನು ಛಿದ್ರಗೊಳಿಸಿತು. ರಾಹುಲ್ ಗಾಂಧಿಯವರು ತಮ್ಮ ತಾತ ತಪ್ಪು ಮಾಡಿದ್ದಾರೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ” ಎಂದು ಹೇಳಿದರು.

ಅಲ್ ಖೈದಾ ಕಚೇರಿ
ಅಸ್ಸಾಂ ನಲ್ಲಿ ನೆಲಸಮಗೊಂಡ ಮದರಸಗಳೆಲ್ಲ ಮದರಸಾಗಳಾಗಿರಲಿಲ್ಲ ಅಲ್ ಖೈದಾ ಕಚೇರಿಗಳಾಗಿದ್ದವು. ನಾವು 2 ರಿಂದ 3 ಮದರಸಗಳನ್ನು ಕೆಡವಿದ್ದೇವೆ. ಅಲ್ ಖೈದಾದ ಕೆಲಸ ನಡೆಯುವ ಮದರಸಾ ಬೇಡ ಎಂದು ಮುಸ್ಲಿಂ ಸಮುದಾಯದವರೇ ಕೆಡವಲು ಬರುತ್ತಿದ್ದಾರೆ, ಮದರಸಾದ ಸ್ವರೂಪವೇ ಬದಲಾಗುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

ಜೈರಾಮ್ ರಮೇಶ್ ಯಾರು?
ಮೊದಲು ಹೇಳಿ, ಜೈರಾಮ್ ರಮೇಶ್ ಯಾರು? ಅವರು ಅಸ್ಸಾಂನಲ್ಲಿ ವಾಸಿಸುವವರೇ ? ಅವರು ಯಾರು? ನನಗೆ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಹೆಸರು ಯಾರಿಗೆ ನೆನಪಾಗುತ್ತದೆ? ನಾನು ಕಾಂಗ್ರೆಸ್‌ನಲ್ಲಿದ್ದಾಗ ಅಂತಹ ಹೆಸರಿನ ವ್ಯಕ್ತಿಯೊಂದಿಗೆ ಎಂದಿಗೂ ಹತ್ತಿರವಾಗಿರಲಿಲ್ಲ. ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಬಾಲಿಶ, ಅಪಕ್ವ ಮತ್ತು ಅವರು ತಮ್ಮ ಹೊಸ ಯಜಮಾನರಿಗೆ ನಿಷ್ಠೆಯನ್ನು ಸಾಬೀತುಪಡಿಸಲು ಮಾತ್ರ ಹೇಳಿಕೆಗಳನ್ನು ನೀಡುತ್ತಾರೆ ಎಂದು ಅಸ್ಸಾಂ ಸಿಎಂ ಹೇಳಿಕೆಗೆ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next