ಗುವಾಹಟಿ: ಅಸ್ಸಾಂನ ಜಾಗೀರೋಡ್‌ನ ತಿವಾ ಶಾಂಗ್ ಗ್ರಾಮದಲ್ಲಿ ಗೋಬಾ ದೇವರಾಜ ರಾಜ್ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ 142 ಮಂದಿ ಘರ್ ವಾಪ್ಸಿ ಮೂಲಕ ಸನಾತನ ಧರ್ಮಕ್ಕೆ ಹಿಂತಿರುಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಗೋಬಾ ದೇವರಾಜ ರಾಜ್ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜುರ್ ಸಿಂಗ್ ಬೊರ್ಡೊಲೊಯ್, “ಸ್ವ-ಇಚ್ಛೆಯಿಂದ 142 ಮಂದಿ ಸನಾತನ ಧರ್ಮಕ್ಕೆ ಹಿಂತಿರುಗಿದ್ದಾರೆ.
ತಿವಾ ಬುಡಕಟ್ಟು ಸೇರಿದ್ದ 1,100 ಕುಟುಂಬಗಳು ಈ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಪುನಃ ಸನಾತನ ಧರ್ಮಕ್ಕೆ ಮರಳುವ ನಿರ್ಧಾರವನ್ನು ಈ ಕುಟುಂಬಗಳು ಮಾಡಿವೆ,’ ಎಂದು ತಿಳಿಸಿದ್ದಾರೆ.
“ಮೂಲತಃ ಹಿಂದೂಗಳಾಗಿರುವ ತಿವಾ ಬುಡಕಟ್ಟು ಜನರಲ್ಲಿ ಕೆಲವರು ಆರ್ಥಿಕ ಪರಿಸ್ಥಿತಿ ಹಾಗೂ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು,’ ಎಂದು ಹೇಳಿದ್ದಾರೆ.