Advertisement
ನಮ್ಮನ್ನು ನಾವು ಕೇಳಿಕೊಳ್ಳುವ ಪ್ರಶ್ನೆಗಳಿಂದ ನಮಗೆ ಏನಾದರೂ ಪ್ರಯೋಜನವಾಗುತ್ತಿದೆ ಎಂದು ತಿಳಿಯುವುದು ನಾವು ಕೇಳಿಕೊಂಡ ಪ್ರಶ್ನೆಯಿಂದ ದೊರಕಿದ ಉತ್ತರವನ್ನು ಅಭ‍್ಯಾಸ ಮಾಡಿದಾಗ ಮಾತ್ರ. ಇಲ್ಲವೆಂದರೇ, ಎಲ್ಲವೂ ವ್ಯರ್ಥವಾಗಿ ಬಿಡುತ್ತವೆ.
Related Articles
Advertisement
ನಮ್ಮ ಬಗ್ಗೆ ನಾವು ಪ್ರಶಾಂತವಾಗಿ ಆಲೋಚಿಸಬಹದು. ಆತ್ಮಾವಲೋಕನ ಮಾಡಿಕೊಳ್ಳಬಹುದು. ನಾವು ಮಾಡುವ ಕೆಲಸಗಳನ್ನು ನಮ್ಮ ಪ್ರವರ್ತನಗಳನ್ನು ನಾವೇ ಅಭಿನಂದಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ನಾವು ಮಾಡಿದ ಕೆಲಸಗಳು ನಮಗೆ ಇಷ್ಟವಾಗದೇ ಇರಬಹುದು. ಇವು ಪುನರಾಲೋಚನೆಯಿಂದ , ಮರು ಪ್ರಶ್ನಿಸಿಕೊಳ್ಳುವುದರಿಂದ ನಮ್ಮನ್ನು ನಾವು ನಮ್ಮ ಇರುವಿಕೆಯನ್ನು ಸರಿ ಪಡಿಸಿಕೊಳ್ಳಬಹುದು. ಇವೆಲ್ಲವೂ ನಮ್ಮ ಅಂತರಂಗದೊಳಗೆ ಅಥವಾ ಅಂತರಂಗದೊಂದಿಗೆ ಮಾಡುವ ಪುನರಾಲೋಚನೆ ಅಥವಾ ಮರು ಪ್ರಶ್ನೆಗಳಿಂದ ಸಾಧ್ಯವಾಗುತ್ತದೆ.
ನಮ್ಮಲ್ಲಿನ ಪ್ರಶಾಂತತೆಗೆ ನಮಗೆ ಅಡಚಣೆಯನ್ನು ಮಾಡಲು ನಮ್ಮಲ್ಲಿರುವ ಅರಿಷಡ್ವರ್ಗಗಳು ಅಂದರೇ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ ನಮ್ಮನ್ನು ಒಮ್ಮೊಮ್ಮೆ ಕೆರಳಿಸುತ್ತದೆ. ಕಾಮ ಅಂದರೇ ಕೋರಿಕೆ, ಬಯಕೆ, ಅದು ಲಭಿಸದೆ ಇದ್ದರೇ, ಅದನ್ನು ಹೇಗಾದರೂ ಸಾಧಿಸಬೇಕೆಂಬ ಪ್ರಲೋಭ(ಛಲ), ಅದರ ಮೇಲೆ ಮತ್ತಷ್ಟು ಹೆಚ್ಚಾಗುವ ವ್ಯಾಮೋಹ. ಅದು ಕೂಡ ತೀರದಿದ್ದರೇ ಮದ ಮತ್ಸರ ಇವುಗಳು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಕ್ಕೂ ಒಮ್ಮೊಮ್ಮೆ ತೊಡಕುಂಟು ಮಾಡುತ್ತವೆ.
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ನಮ್ಮ ಭವಿಷ್ಯಕ್ಕೆ ಅದೊಂದು ಗಟ್ಟಿಯಾದ ಬುನಾದಿ ಹಾಕಿಕೊಡುತ್ತದೆ. ನಾವು ನಾವಾಗಿಯೆ ನಮ್ಮನ್ನು ಕೇಳಿಕೊಳ್ಳುವ ಪ್ರಶ್ನೆಗಳು ಒಮ್ಮೊಮ್ಮೆ ಹಿತವೂ ಎನ್ನಿಸಬಹುದು ಅಥವಾ ದುಃಖವೂ ತರಿಸಬಹುದು. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.
ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ನಮಗೆ ಪ್ರಶ್ನಿಸಿಕೊಳ್ಳುವುದಕ್ಕೆ ವ್ಯವದಾನವಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಯವೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾಗರೂಕತೆಯಿಂದಿರುವುದು ಒಳ್ಳೆಯದು. ಮತ್ತು ಅವರೊಂದಿಗೆ ಮಾತು ಮುಗಿಸಿದ ಮೇಲೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮಗೆ ಅದು ಮಹತ್ತರವಾದದ್ದನ್ನು ನೀಡುತ್ತದೆ. ನೆನಪಿರಲಿ ನಿಮ್ಮನ್ನು ಶೋಧಿಸುವವರು ನೀವೇ ಆಗುವುದು ನಿಮಗೂ, ನಿಮ್ಮ ವ್ಯಕ್ತಿತ್ವಕ್ಕೂ ಒಳ್ಳೆಯದು.
-ಶ್ರೀರಾಜ್ ವಕ್ವಾಡಿ
ಓದಿ : ಕಾಂಗೋದಲ್ಲಿ ತಾಂಡವಾಡುತ್ತಿರುವ ಹಸಿವು : ವಿಶ್ವ ಸಂಸ್ಥೆಯಿಂದ ಎಚ್ಚರಿಕೆ