Advertisement

ಏಶ್ಯನ್‌ ರೋಯಿಂಗ್‌ ಚಾಂಪಿಯನ್‌ಶಿಪ್‌: ಅರವಿಂದ್‌ಗೆ ಚಿನ್ನದ ಪದಕ

11:05 PM Dec 12, 2021 | Team Udayavani |

ಬಾನ್‌ ಚಾಂಗ್‌ (ಥಾಯ್ಲೆಂಡ್‌): ಏಶ್ಯನ್‌ ರೋಯಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೀನಿಯರ್‌ ಸ್ಪರ್ಧಾಳು ಅರವಿಂದ್‌ ಸಿಂಗ್‌ ಚಿನ್ನದ ಪದಕ ಜಯಿಸಿದ್ದಾರೆ.

Advertisement

ಪುರುಷರ ಸಿಂಗಲ್‌ ಲೈಟ್‌ವೇಟ್‌ ಸ್ಕಲ್ಸ್‌ ವಿಭಾಗದಲ್ಲಿ ಅವರು ಈ ಸಾಧನೆಗೈದರು. ಜತೆಗೆ ಭಾರತಕ್ಕೆ 3 ಬೆಳ್ಳಿ ಪದಕಗಳೂ ಒಲಿದಿವೆ. ಒಟ್ಟು 2 ಚಿನ್ನ, 4 ಬೆಳ್ಳಿ ಪದಕಗಳೊಂದಿಗೆ ಭಾರತ ಕೂಟವನ್ನು ಮುಗಿಸಿತು.

ಕೂಟದ ಅಂತಿಮ ದಿನವಾದ ರವಿವಾರದ ಸ್ಪರ್ಧೆಯಲ್ಲಿ ಅರವಿಂದ್‌ ಸಿಂಗ್‌ ಉಜ್ಬೆಕಿಸ್ಥಾನ, ಚೀನ, ವಿಯೆಟ್ನಾಂ, ಇಂಡೋನೇಶ್ಯ ಮತ್ತು ಥಾಯ್ಲೆಂಡ್‌ ಸ್ಪರ್ಧಿಗಳನ್ನು ಹಿಂದಿಕ್ಕಿದರು. 7:55.942 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

3 ಬೆಳ್ಳಿ ಪದಕ
ಬೆಳ್ಳಿ ಪದಕಗಳು ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್‌, ಕ್ವಾಡ್ರಾಪಲ್‌ ಸ್ಕಲ್ಸ್‌ ಮತ್ತು ಕಾಕ್ಸ್‌ಲೆಸ್‌ ಫೋರ್‌ ವಿಭಾಗಗಳಲ್ಲಿ ಒಲಿದು ಬಂದವು. ಡಬಲ್‌ ಸ್ಕಲ್ಸ್‌ನಲ್ಲಿ ಆಶಿಷ್‌ ಫ‌ುಗಟ್‌-ಸುಖ್‌ಜಿಂದರ್‌ ಸಿಂಗ್‌ (7:12.568 ಸೆಕೆಂಡ್‌); ಕ್ವಾಡ್ರಾಪಲ್‌ ಸ್ಕಲ್ಸ್‌ನಲ್ಲಿ ಬಿಟ್ಟು ಸಿಂಗ್‌, ಜಾಕರ್‌ ಖಾನ್‌, ಮನ್‌ಜಿàತ್‌ ಕುಮಾರ್‌ ಮತ್ತು ಸುಖಮೀತ್‌ ಸಿಂಗ್‌ (6:33.661 ಸೆಕೆಂಡ್‌); ಕಾಕ್ಸ್‌ಲೆಸ್‌ನಲ್ಲಿ ಜಸ್ವೀರ್‌ ಸಿಂಗ್‌, ಪುನೀತ್‌ ಕುಮಾರ್‌, ಗುರ್ಮೀತ್‌ ಸಿಂಗ್‌ ಮತ್ತು ಚರಣ್‌ಜೀತ್‌ ಸಿಂಗ್‌ (6:51.661 ಸೆಕೆಂಡ್‌) ದ್ವಿತೀಯ ಸ್ಥಾನಿಯಾದರು. ಕ್ವಾಡ್ರಾಪಲ್‌ ಸ್ಕಲ್ಸ್‌ನಲ್ಲಿ ಕೇವಲ 0.523 ಸೆಕೆಂಡ್‌ಗಳ ಅಂತರದಲ್ಲಿ ಚಿನ್ನ ಭಾರತದ ಕೈಜಾರಿತು.

ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್‌ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ

Advertisement

ಕೂಟದಲ್ಲಿ ಉತ್ತಮ ಸಾಧನೆಗೈದ ರೋವರ್‌ಗಳನ್ನು ರೋಯಿಂಗ್‌ ಫೆಡರೇಶನ್‌ ಆಫ್ ಇಂಡಿಯಾದ ಮಹಾ ಕಾರ್ಯದರ್ಶಿ ಎಂ.ವಿ. ಶ್ರೀರಾಮ್‌ ಅಭಿನಂದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next