ಉಲಾನ್‌ಬಾಟರ್ (ಮಂಗೋಲಿಯ) : ಕಜಾಕ್‌ಸ್ಥಾನದ ಅಜ್ಮತ್ ದೌಲತ್‌ಬೆಕೋವ್ ಅವರ ಅಮೋಘ ರಕ್ಷಣಾತ್ಮಕ ಆಟದಿಂದಾಗಿ ಭಾರತದ ದೀಪಕ್ ಪೂನಿಯ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 92 ಕೆ.ಜಿ. ವಿಭಾಗದ ಸ್ಪರ್ಧೆ ಯಲ್ಲಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ದೀಪಕ್ ಅವರಿಗಿದು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸಿಕ್ಕಿದ ನಾಲ್ಕನೇ ಪದಕವಾಗಿದೆ. ಅವರು ಈ ಹಿಂದೆ 2021ರಲ್ಲಿ ಬೆಳ್ಳಿ ಮತ್ತು 2019 ಮತ್ತು 2020ರಲ್ಲಿ ಕಂಚು ಜಯಿಸಿದ್ದರು. ಇನ್ನೊಂದು ಸ್ಪರ್ಧೆಯಲ್ಲಿ ಭಾರತದ ವಿಕಿ ಚಹರ್ ಉಜ್ಬೆಕಿಸ್ಥಾನದ ಅಜಿನಿಯಾಜ್ ಸಪರ್ನಿಯಾಜೋವ್ ಅವರೆದುರು ಗೆದ್ದು ಕಂಚಿನ ಪದಕ ಪಡೆದರು.
ಭಾರತ ಈ ಸ್ಪರ್ಧೆಯಲ್ಲಿ ಒಟ್ಟಾರೆ 17 ಪದಕ ಗೆದ್ದುಕೊಂಡಿದೆ. ರವಿ ದಹಿಯಾ ಮಾತ್ರ ಭಾರತ ಪರ ಚಿನ್ನ ಗೆದ್ದ ಸಾಧಕರಾಗಿದ್ದಾರೆ. ಅವರು ಶನಿವಾರ ನಡೆದ 57 ಕೆ.ಜಿ. ವಿಭಾಗದ ಫ್ರಿಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು.