Advertisement
3 ಗೇಮ್ಸ್ ತೀವ್ರ ಪೈಪೋಟಿಯಿಂದ ಕೂಡಿದ್ದವು. ಒಂದು ಗಂಟೆ, 25 ನಿಮಿ ಷಗಳ ತನಕ ಹೋರಾಟ ಸಾಗಿತು. ಅಮಿತ್ ಸರ್ವಾಧಿಕ 16 ಅಂಕ ಗಳಿಸಿದರೆ, ಕರ್ನಾಟಕದ ಅಶ್ವಲ್ ರೈ 14 ಅಂಕ ತಂದಿತ್ತರು. ವಿನೀತ್ ಕುಮಾರ್ 12 ಅಂಕ ಗಳಿಸಿದರು.
ಪುರುಷರ ಹಾಗೂ ವನಿತಾ ಟೇಬಲ್ ಟೆನಿಸ್ ತಂಡ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರದ ಸ್ಪರ್ಧೆಯಲ್ಲಿ ಯೆಮನ್ ವಿರುದ್ಧ ಭಾರತ 3-0 ಅಂತರದ ಗೆಲುವು ಸಾಧಿಸಿತು. ಅಚಂತ ಶರತ್ ಕಮಲ್, ಜಿ. ಸಥಿಯನ್ ಮತ್ತು ಹರ್ಮೀತ್ ದೇಸಾಯಿ ಗೆಲುವು ತಂದಿತ್ತರು. 41 ವರ್ಷದ ಅಚಂತ ಶರತ್ ಕಮಲ್ ಅವರಿಲ್ಲಿ ಕೊನೆಯ ಸಲ ಏಷ್ಯನ್ ಗೇಮ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಇಬ್ರಾಹಿಂ ಅಬ್ದುಲ್ಲ ಹಕೀಮ್ ಮೊಹಮ್ ಗುಬ್ರಾನ್ ವಿರುದ್ಧ 11-3, 11-4, 11-6 ಅಂತರದ ಜಯ ಸಾಧಿಸಿದರು. ವನಿತಾ ತಂಡ ಸಿಂಗಾಪುರ ವಿರುದ್ಧ 3-2 ಅಂತರದಿಂದ ಗೆದ್ದು ಬಂದಿತು. ಮಣಿಕಾ ಬಾತ್ರಾ, ಐಹಿಕಾ ಮುಖರ್ಜಿ, ಶ್ರೀಜಾ ಅಕುಲ್ ಭಾರತ ತಂಡದ ಸದಸ್ಯರಾಗಿದ್ದರು.
Related Articles
ಭಾರತದ ರೋವರ್ ಬಲ್ರಾಜ್ ಪನ್ವಾರ್ ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದಲ್ಲಿ “ಫೈನಲ್‌ಎ’ ತಲುಪಿದ್ದಾರೆ. 24 ವರ್ಷದ ಪನ್ವಾರ್ ಸೆಮಿಫೈನಲ್ ಎಫ್ ಎ/ಬಿ2 ವಿಭಾಗದಲ್ಲಿ 7:22:22 ಸಮಯದಲ್ಲಿ ಈ ದೂರವನ್ನು ಕ್ರಮಿಸಿದರು. “ಫೈನಲ್ ಎ’ಯ ಮೊದಲ ಮೂವರಿಗೆ ಪದಕ ಒಲಿಯಲಿದೆ.
Advertisement