ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ನಲ್ಲಿ ಭಾರತವು ಭಾನುವಾರ ಅಥ್ಲೆಟಿಕ್ಸ್‌ನಲ್ಲಿ ಒಟ್ಟು ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಪಡೆಯುವ ಮೂಲಕ ಪದಕಗಳ ಪಟ್ಟಿಯಲ್ಲಿ ವಿಜೃಂಭಿಸಿದೆ.
ತೇಜಿಂದರ್ ಪಾಲ್ ಸಿಂಗ್ ತೂರ್ ಶಾಟ್‌ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರು. ತೇಜಿಂದರ್ ಪಾಲ್ ಸಿಂಗ್ ತೂರ್ ತನ್ನ ಅಂತಿಮ ಪ್ರಯತ್ನದಲ್ಲಿ 20.36 ಮೀ ದೂರವನ್ನು ಎಸೆದರು. ಸೌದಿ ಅರೇಬಿಯಾದ ಮೊಹಮ್ಮದ್ ದೌದಾ ತಮ್ಮ ಅಂತಿಮ ಪ್ರಯತ್ನದಲ್ಲಿ ತೇಜಿಂದರ್ ಪಾಲ್ ಸಿಂಗ್ ತೂರ್ ಅವರು ಸ್ಥಾಪಿಸಿದ ಮಾರ್ಕ್ ಅನ್ನು ಮೀರಿಸಲು ವಿಫಲರಾದರು.
ಅವಿನಾಶ್ ಸೇಬಲ್ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಜ್ಯೋತಿ ಯರ್ರಾಜಿ ಅವರ ಕಂಚಿನ ಪದಕವನ್ನು ಬೆಳ್ಳಿಗೆ ಮೇಲ್ದರ್ಜೆಗೇರಿಸಲಾಯಿತು, ಎರಡನೇ ಸ್ಥಾನ ಪಡೆದ ಚೀನಾದ ವು ಯಾನಿ ತಪ್ಪಾದ ಆರಂಭಕ್ಕಾಗಿ ಅನರ್ಹಗೊಂಡರು.
ಭಾರತ ಬ್ಯಾಡ್ಮಿಂಟನ್ ತಂಡವು ಚಿನ್ನದ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಸೋತ ನಂತರ ಐತಿಹಾಸಿಕ ಬೆಳ್ಳಿಯನ್ನು ಗೆದ್ದುಕೊಂಡಿತು. ಚೀನಾದ ವೆಂಗ್ ಹೊಂಗ್ಯಾಂಗ್ ಅವರು ಭಾರತದ ಮಿಥುನ್ ಮಂಜುನಾಥ್ ಅವರನ್ನು ನಿರ್ಣಾಯಕ ಪಂದ್ಯದಲ್ಲಿ ಸೋಲಿಸಿದರು.ಚೈನೀಸ್ ತಾರೆ ಮೊದಲ ಗೇಮ್ ಗೆದ್ದು ಎರಡನೇ ಗೇಮ್ ನಲ್ಲಿ 16-4 ಮುನ್ನಡೆ ಸಾಧಿಸಿದರು. ಭಾರತ ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕದೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.
ಭಾರತ ಪದಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದು,13 ಚಿನ್ನ, 21 ಬೆಳ್ಳಿ ಮತ್ತು 19 ಕಂಚು ಸೇರಿ
53 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಚೀನಾ 132 ಚಿನ್ನ ಸೇರಿ 243 ಪಾದಕಗಳೊಂದಿಗೆ ಆಗ್ರ ಸ್ಥಾನದಲ್ಲಿ ವಿರಾಜಮಾನವಾಗಿದೆ.