Advertisement

Asian Games ಫುಟ್‌ಬಾಲ್‌: ಚೀನ ವಿರುದ್ಧ 1-5 ಸೋಲು

12:09 AM Sep 21, 2023 | Team Udayavani |

ಹಾಂಗ್‌ಝೂ: ತೃತೀಯ ದರ್ಜೆ ಫ‌ುಟ್‌ಬಾಲ್‌ ತಂಡದೊಂದಿಗೆ ಏಷ್ಯನ್‌ ಗೇಮ್ಸ್‌ಗೆ ಆಗಮಿಸಿರುವ ಭಾರತ, ಮೊದಲ ಪಂದ್ಯದಲ್ಲೇ ಚೀನ ವಿರುದ್ಧ 1-5 ಅಂತರದ ಅವಮಾನಕಾರಿ ಸೋಲನುಭವಿಸಿದೆ. ಸೋಮವಾರ ರಾತ್ರಿಯಷ್ಟೇ ಚೀನ ತಲುಪಿದ ಭಾರತ ತಂಡ ಸಂಪೂರ್ಣ ಸುಸ್ತಾದಂತಿತ್ತು. ವಿಮಾನ ಪ್ರಯಾಣದ ಬಳಲಿಕೆಯಲ್ಲಿದ್ದ ಆಟಗಾರರ ನಡುವೆ ಸಮನ್ವಯವೂ ಕಾಣಿಸಲಿಲ್ಲ.

Advertisement

ಚೀನಾ ಪರ ಗಿಯಾವೊ ತಿಯಾನ್ಯಿ (17ನೇ ನಿಮಿಷ), ದಾಯ್‌ ವೀಜುನ್‌ (51ನೇ ನಿಮಿಷ), ತಾವೊ ಖೀಯಾಂಗ್‌ಲಾಂಗ್‌ (72, 75ನೇ ನಿಮಿಷ), ಹಾವೊ ಫ್ಯಾಂಗ್‌ (90+2) ಗೋಲು ಬಾರಿಸಿದರು. ಭಾರತದ ಏಕೈಕ ಗೋಲನ್ನು ಪಂದ್ಯದ 45+1ನೇ ನಿಮಿಷದಲ್ಲಿ ಕೆ.ಪಿ. ರಾಹುಲ್‌ ಹೊಡೆದರು.

ಭಾರತ ಚಿನ್ನ ಗೆಲ್ಲುವ ನೆಚ್ಚಿನ ತಂಡವೆನಿಸಿತ್ತು. ಆದರೆ ಚೀನ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತದ್ದು ಮುಜುಗರ ತಂದಿದೆ. ಭಾರತವಿನ್ನು ಗುರುವಾರ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಳಿಕ ಮಾಯೆನ್ಮಾರ್‌ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯಗಳನ್ನು ಭಾರತ ಗೆಲ್ಲಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next