ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ಅಧಿಕೃತವಾಗಿ ಆರಂಭವಾಗ ದಿದ್ದರೂ ಫುಟ್ ಬಾಲ್ ಸ್ಪರ್ಧೆಯ ಬಣ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿದೆ.
ಕೊನೆ ಕ್ಷಣದಲ್ಲಿ ತಂಡವನ್ನು ಪ್ರಕಟಿಸಿದ ಬಳಿಕ ಯಾವುದೇ ವಿಶ್ರಾಂತಿ ಮತ್ತು ತರಬೇತಿ ಪಡೆಯದ ಭಾರತೀಯ ಫುಟ್ ಬಾಲ್ ತಂಡವು ಮೊದಲ ಪಂದ್ಯದಲ್ಲಿ ಚೀನ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 5 ಗಂಟೆಗೆ ಆರಂಭವಾಗಲಿದೆ.
ಕಳೆದ ಶುಕ್ರವಾರವಷ್ಟೇ ಭಾರತ ತಂಡ ಅಂತಿಮ ತಂಡವನ್ನು ಪ್ರಕಟಿಸಿತ್ತು ಮತ್ತು ರವಿವಾರ ಚೀನಕ್ಕೆ ಪ್ರಯಾಣಿಸಿತ್ತು. ಹೀಗಾಗಿ ಪಂದ್ಯದ ಮೊದಲು ಆಟಗಾರರಿಗೆ ಅಭ್ಯಾಸ ಮಾಡಲು ಯಾವುದೇ ಸಮಯ ಸಿಕ್ಕಿಲ್ಲ. ಇದರ ಜತೆ ಡಿಫೆಂಡರ್‌ಗಳಾದ ಕೊನ್ಸಮ್ ಚಿಂಗ್ಲೆನ್ಸನ ಸಿಂಗ್ ಮತ್ತು ಲಾಲ್‌ಚುಂಗ್‌ನುಂಗ ಅವರ ಪ್ರಯಾಣದ ವೀಸಾ ಸಿದ್ಧಗೊಳ್ಳದ ಕಾರಣ ತಂಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಒಂದು ವೇಳೆ “ಎ’ ಬಣದ ಮೊದಲ ಪಂದ್ಯಕ್ಕೆ ಅವರಿಬ್ಬರು ಲಭ್ಯರಾಗದಿದ್ದರೆ ಇದರಿಂದ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದರ ಜತೆ ಹಿರಿಯ ಡಿಫೆಂಡರ್ ಸಂದೇಶ್ ಜಿಂಗನ್ ಮತ್ತು ಅನುಭವಿ ಸುನೀಲ್ ಚೇತ್ರಿ ಕೂಡ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ಕೋಚ್ ಐಗರ್ ಸ್ಟಿಮ್ಯಾಕ್ ಹೇಳಿದ್ದಾರೆ.
ಬಣದ ಇನ್ನೆರಡು ಪಂದ್ಯಗಳಲ್ಲಿ ಭಾರತ ಸೆ. 21ರಂದು ಬಾಂಗ್ಲಾದೇಶ ಮತ್ತು ಸೆ. 24ರಂದು ಮ್ಯಾನ್ಮಾರ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗÙಲ್ಲಿ ಭಾರತದ ಗೆಲುವಿಗೆ ಹೆಚ್ಚಿನ ಅವಕಾಶ ಇರುವ ಕಾರಣ ಕೋಚ್ ಸ್ಟಿಮ್ಯಾಕ್ ಈ ನಿರ್ಧಾರ ಮಾಡಿದ್ದಾರೆ.
2002ರಲ್ಲಿ ಮುಖಾಮುಖಿ
ಭಾರತ ಮತ್ತು ಚೀನ ಏಷ್ಯನ್ ಗೇಮ್ಸ್ ನಲ್ಲಿ ಈ ಹಿಂದೆ 2002ರಲ್ಲಿ ಕೊರಿಯದ ಬೂಸಾನ್‌ನಲ್ಲಿ ಎದುರಾಗಿದ್ದವು. ಈ ಹೋರಾಟದಲ್ಲಿ ಭಾರತ 0-2 ಗೋಲುಗಳಿಂದ ಸೋಲನ್ನು ಕಂಡಿತ್ತು. ಈ ವೇಳೆ ಭಾರತೀಯ ತಂಡದಲ್ಲಿ ಭೂತಿಯ, ಶಣ್ಮುಗಂ ವೆಂಕಟೇಶ್, ಜೊ ಪಾಲ್ ಅಂಚೆರಿ, ರೆನೆಡಿ ಸಿಂಗ್ ಮತ್ತು ಹಾಲಿ ಸಹಾಯಕ ಕೋಚ್ ಮಹೇಶ್ ತಂಡದಲ್ಲಿದ್ದರು.