Advertisement

ಕೋವಿಡ್ ಹೆಚ್ಚಳ: ಹ್ಯಾಂಗ್‌ಝೌನ ಏಷ್ಯನ್ ಕ್ರೀಡಾಕೂಟ ಮುಂದೂಡಿಕೆ

04:23 PM May 06, 2022 | Team Udayavani |

ಬೀಜಿಂಗ್ : ಸೆಪ್ಟೆಂಬರ್‌ನಲ್ಲಿ ಹ್ಯಾಂಗ್‌ಝೌನಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಸಂಘಟಕರು ಶುಕ್ರವಾರ ಹೇಳಿದ್ದಾರೆ.

Advertisement

ವಿಳಂಬಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ, ಆದರೆ ಚೀನಾದಲ್ಲಿ ಕೋವಿಡ್ ಪ್ರಕರಣಗಳ ವ್ಯಾಪಕ ಹೆಚ್ಚಳದ ಕಾರಣಕ್ಕೆ ಮುಂದೂಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಸೋಂಕು ಆರಂಭವಾದಾಗಿಂದಲೂ ಚೀನಾ ಸೋಂಕು ನಿವಾರಣೆಗೆ ಹೋರಾಟ ನಡೆಸುತ್ತಿದೆ.

“2022 ರ ಸೆಪ್ಟೆಂಬರ್ 10 ರಿಂದ 25 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಬೇಕಿದ್ದ 19 ನೇ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಲಾಗುವುದು ಎಂದು ಏಷ್ಯಾದ ಒಲಿಂಪಿಕ್ ಕೌನ್ಸಿಲ್ ಘೋಷಿಸಿದೆ” ಎಂದು ಅಧಿಕೃತ ಗೇಮ್ಸ್ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ಚೀನಾ ಮಾಧ್ಯಮದಲ್ಲಿ ಮೊದಲು ಪೋಸ್ಟ್ ಮಾಡಲಾಗಿದೆ.

ಕ್ರೀಡಾ ಸ್ಪರ್ಧೆಯ ಹೊಸ ದಿನಾಂಕಗಳನ್ನು ಶೀಘ್ರದಲ್ಲಿ  ಪ್ರಕಟಿಸಲಾಗುವುದು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next