Advertisement

ಸ್ವಪ್ನಾ, ಅರ್ಪಿಂದರ್‌ಗೆ ಚಿನ್ನದ ಸಂಭ್ರಮ; 54ಕ್ಕೇರಿದ ಪದಕ ಸಂಖ್ಯೆ

07:32 PM Aug 29, 2018 | Team Udayavani |

ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್‌ ಗೇಮ್ಸ್‌ನ ಇಂದಿನ 11ನೇ ದಿನದಂದು ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಗಳಿಸಿದೆ. ಭಾರತದ ಒಟ್ಟು ಪದಕ ಗಳಿಕೆ 54. ಇದರಲ್ಲಿ ಚಿನ್ನ 11, ಬೆಳ್ಳಿ 20, ಕಂಚು 23.

Advertisement

ಇಂದು ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಭಾರತದ ಅರ್ಪಿಂದರ್‌ ಸಿಂಗ್‌ ಚಿನ್ನ ಗೆಲ್ಲುವ ಸಾಧನೆ ಮಾಡಿದ್ದಾರೆ. 

ಮಹಿಳೆಯರ 200 ಮೀ. ಓಟದ ಸ್ಫರ್ಧೆಯಲ್ಲಿ ದ್ಯುತೀ ಚಂದ್‌ ಅವರು ಬೆಳ್ಳಿ ಪದಕ ಗೆದ್ದರು. 

ಮಹಿಳೆಯರ ಹೆಪ್ಟತ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್‌ ಚಿನ್ನ ಗೆದ್ದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಗಳಿಕೆ 11ಕ್ಕೇರಿತು. 

ಈ ನಡುವೆ ಭಾರತೀಯರ ವನಿತಾ ಸ್ಕ್ವಾಷ್‌ ತಂಡ ಸೆಮಿ ಫೈನಲ್‌ಗೆ ತಲುಪಿದ್ದು ಕನಿಷ್ಠ ಒಂದು ಪದಕ ಪಡೆಯುವುದನ್ನು ಖಾತರಿಪಡಿಸಿಕೊಂಡಿದೆ. 

Advertisement

ಇದೇ ರೀತಿ ಬಾಕ್ಸಿಂಗ್‌ನಲ್ಲಿ ಅಮಿತ್‌ ಪಂಘಾಲ್‌ ಸೆಮಿ ಫೈನಲ್‌ಗೆ ತೇರ್ಗಡೆಗೊಂಡು ಕನಿಷ್ಠ ಒಂದು ಪದಕ ಪಡೆಯುವುದು ಖಾತರಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next