Advertisement

ಲಸಿಕೆ ಉತ್ಪಾದನೆಗೆ ದೇಶಕ್ಕೆ 11 ಸಾವಿರ ಕೋಟಿ ನೆರವು

11:39 PM Nov 25, 2021 | Team Udayavani |

ಹೊಸದಿಲ್ಲಿ/ಲಂಡನ್‌:  ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌  ಭಾರತಕ್ಕೆ  11,185 ಕೋಟಿ ರೂ ನೆರವು ಪ್ರಕಟಿಸಿದೆ. ಈ ಮೊತ್ತದ ಮೂಲಕ ಕೊರೊನಾಕ್ಕಾಗಿ ಲಸಿಕೆ ಅಭಿವೃದ್ಧಿ ಮತ್ತು ವಿತರಣೆಗೆ ನೆರವಾಗಲಿದೆ ಎಂದು ಬ್ಯಾಂಕ್‌ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಏಷ್ಯದ ಮೂಲಸೌಕರ್ಯ ಬಂಡವಾಳ ಹೂಡಿಕೆ ಬ್ಯಾಂಕ್‌ ಕೂಡ ಹೆಚ್ಚುವರಿಯಾಗಿ 500 ಮಿಲಿಯ ಅಮೆರಿಕನ್‌ ಡಾಲರ್‌ ಮೊತ್ತದ ನೆರವನ್ನೂ ಒದಗಿಸಲಿದೆ. ಎಡಿಬಿ ನೆರವಿನಿಂದ ಕನಿಷ್ಠ 66.7 ಕೋಟಿ ಡೋಸ್‌ಗಳನ್ನು 31.7 ಕೋಟಿ ಮಂದಿಗೆ ನೀಡಲು ಸಾಧ್ಯವಾಗಲಿದೆ.

Advertisement

ಹೊಸ ರೂಪಾಂತರಿ:  ಹಲವು ದೇಶಗಳಲ್ಲಿ ಮತ್ತೆ ಅದರ ಅಬ್ಬರ ಕಾಣಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ದ.ಆಫ್ರಿಕಾದಲ್ಲಿ ಬಿ.1.1.529 ಎಂಬ ಹೊಸ ಮಾದರಿಯ ರೂಪಾಂತರಿ ಇರುವ ಬಗ್ಗೆ ದೃಢಪ­ಟ್ಟಿದೆ ಎಂದು ಲಂಡನ್‌ ಇಂಪೀರಿಯಲ್‌ ಕಾಲೇಜಿನ ವೈರಾಣು ತಜ್ಞ ಡಾ. ಟಾಂ ಪಿಕಾಕ್‌ ಹೇಳಿದ್ದಾರೆ. ಇದು ಹೆಚ್ಚಿನ ಪ್ರಮಾಣದಲ್ಲಿ ರೂಪಾಂತರ ಹೊಂದಲು ಸಾಮರ್ಥ್ಯ ಇರುವಂಥದ್ದು ಎಂದು ಪ್ರತಿಪಾದಿಸಿದ್ದಾರೆ.  ಹೊಸ ರೂಪಾಂತರಿ ದೃಢಪಡುತ್ತಿದ್ದಂತೆಯೇ ದ.ಆಫ್ರಿಕಾ, ಬೋಟ್ಸ್‌ವಾನಾ, ಹಾಕಾಂಗ್‌ನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂಗು ರಾಜ್ಯಗಳಿಗೆ ಕೇಂದ್ರ ಸರ್ಕಾರ  ಮುನ್ನೆಚ್ಚರಿಕೆ ನೀಡಿದೆ.

ಲಕ್ಷ ದಾಟಿದ ಸಾವು: ಜರ್ಮನಿಯಲ್ಲಿ ಸೋಂಕಿನಿಂದಾಗಿ ಅಸುನೀಗಿದವರ ಸಂಖ್ಯೆ 1 ಲಕ್ಷ ದಾಟಿದೆ. ಐರೋಪ್ಯ ಒಕ್ಕೂಟದ ದೇಶದಲ್ಲಿ 1 ಲಕ್ಷ ಸಾವಿನ ಸಂಖ್ಯೆ ದಾಟಿದ 5ನೇ ದೇಶ ಜರ್ಮನಿ. ಮುಂದೆ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳ ಕೊರತೆ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next