Advertisement

ಏಶ್ಯನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ: ತೈ ಜು ಯಿಂಗ್‌ ಗೈರು

10:59 PM Apr 18, 2019 | Team Udayavani |

ಹೊಸದಿಲ್ಲಿ: ಮುಂದಿನ ವಾರ ಆರಂಭವಾಗಲಿರುವ “ಏಶ್ಯನ್‌ ಬ್ಯಾಂಡ್ಮಿಟನ್‌ ಚಾಂಪಿಯನ್‌ಶಿಪ್‌’ ಕೂಟಕ್ಕೆ ತಯಾರಿ ನಡೆಸುತ್ತಿರುವ ಭಾರತದ ತಾರಾ ಆಟಗಾರ್ತಿಯರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಕೊಂಚ ನಿರಾಳರಾಗಿದ್ದಾರೆ.

Advertisement

ವಿಶ್ವದ ನಂ.ವನ್‌ ಆಟಗಾರ್ತಿ ಮತ್ತು ಹಾಲಿ ಚಾಂಪಿಯನ್‌ ತೈವಾನಿನ ತೈ ಜು ಯಿಂಗ್‌ ಕೂಟದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಇದರಿಂದ ಭಾರತೀಯ ಆಟಗಾರ್ತಿಯರಿಗೆ ಲಾಭವಾಗಲಿದೆ ಎಂಬುದೊಂದು ಲೆಕ್ಕಾಚಾರ.ಈ ಕೂಟದ ಬಲಿಷ್ಠ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ತೈ ಜು ಇತ್ತೀಚಿನ ಕೂಟಗಳಲ್ಲಿ ಭಾರತೀಯರ ಸವಾಲಿಗೆ ಅಡ್ಡಿಯಾಗಿದ್ದರು.

ತೈ ಜು ಅನುಪಸ್ಥಿತಿಯಿಂದಾಗಿ “ಆಲ್‌ ಇಂಗ್ಲೆಂಡ್‌ ಚಾಂಪಿಯನ್‌’ ಆಗಿರುವ ಚೀನದ ಚೆನ್‌ ಯೂಫಿ ಅಗ್ರಸ್ಥಾನ ಪಡೆದಿದ್ದಾರೆ. ವಿಶ್ವದ ಮಾಜಿ ನಂ. ವನ್‌ ನೊಜೊಮಿ ಒಕುಹಾರಾ 2ನೇ ಶ್ರೇಯಾಂಕ ಹೊಂದಿದ್ದಾರೆ.

4ನೇ ಶ್ರೇಯಾಂಕದ ಸಿಂಧು ಮೊದಲ ಪಂದ್ಯದಲ್ಲಿ ಜಪಾನಿನ ಸಯಾಕಾ ತಕಹಾಶಿ ಅವರನ್ನು ಎದುರಿಸಲಿದ್ದಾರೆ. ಸೈನಾಗೆ ಮೊದಲ ಎದುರಾಳಿ ಚೀನದ ಹುನ್‌ ಯೂಯಿ.1962ರಿಂದ ಈ ಕೂಟದಲ್ಲಿ ಭಾರತೀಯ ಆಟಗಾರರು ಪ್ರಶಸ್ತಿ ಗೆದ್ದೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next