Advertisement

ಏಷ್ಯಾ ಕಪ್‌: ಅಭ್ಯಾಸ ಆರಂಭಿಸಿದ ವಿರಾಟ್‌ ಕೊಹ್ಲಿ

10:29 PM Aug 11, 2022 | Team Udayavani |

ಮುಂಬಯಿ: ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ಮರಳಿ ಟೀಮ್‌ ಇಂಡಿಯಾವನ್ನು ಕೂಡಿಕೊಂಡಿರುವ ಮಾಜಿ ನಾಯಕ ವಿರಾಟ್‌ ಕೊಹ್ಲಿ ಗುರುವಾರ ಮುಂಬಯಿಯಲ್ಲಿ ಅಭ್ಯಾಸ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿ ಕೊಂಡಿದ್ದಾರೆ.

Advertisement

ಒಳಾಂಗಣ ಕೇಂದ್ರವೊಂದರಲ್ಲಿ ವಿರಾಟ್‌ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದರು. ವಿಕೆಟ್‌ಗಳ ನಡುವಿನ ಓಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಕಂಡುಬಂತು.

ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿರುವ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ಪ್ರವಾಸದ ಬಳಿಕ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದರು. ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಳ್ಳಬೇಕೇ, ಬೇಡವೇ ಎಂಬ ಕುರಿತು ಸಾಕಷ್ಟು ಚರ್ಚೆಗಳೂ ನಡೆದವು. ಆದರೆ ಆಯ್ಕೆ ಸಮಿತಿ ಮುಂಬರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ವಿರಾಟ್‌ ಕೊಹ್ಲಿ ಅವರನ್ನು 15 ಸದಸ್ಯರ ತಂಡಕ್ಕೆ ಸೇರಿಸಿಕೊಂಡಿತು. ಇವರಿಂದಾಗಿ ಶ್ರೇಯಸ್‌ ಅಯ್ಯರ್‌ ಹೊರಗುಳಿಯಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next