Advertisement

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

10:50 PM May 24, 2022 | Team Udayavani |

ಜಕಾರ್ತಾ: ಏಷ್ಯಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ ಜಪಾನ್‌ 5-2 ಗೋಲುಗಳಿಂದ ಭಾರತವನ್ನು ಮಣಿಸಿದೆ. ಇದರೊಂದಿಗೆ ಭಾರತದ ಅನನುಭವಿಗಳ ತಂಡ ತ್ವರಿತ ನಿರ್ಗಮನದ ಅಪಾಯಕ್ಕೆ ಸಿಲುಕಿದೆ.

Advertisement

ಕೂಟದ ಮೊದಲ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ 1-1 ಡ್ರಾ ಸಾಧಿಸಿತ್ತು. ಹೀಗಾಗಿ ಜಪಾನ್‌ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು. ಕೊನೆಯ ಲೀಗ್‌ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ ಗೆದ್ದರೂ ಭಾರತ ನಾಕೌಟ್‌ ಹಂತ ಪ್ರವೇಶಿಸುವುದು ಅನುಮಾನ.

ಜಪಾನ್‌ ಪರ ಕೋಸಿ ಕವಾಬೆ 2 ಗೋಲು ಸಿಡಿಸಿದರು. ಕೆನ್‌ ನಗಯೋಶಿ, ರಿಯೋಮಿ ಊಕಾ ಮತ್ತು ಕೋಜಿ ಯಮಾಸಾಕಿ ತಲಾ ಒಂದೊಂದು ಗೋಲು ಹೊಡೆದರು. ಭಾರತದ ಗೋಲುಗಳು ಪವನ್‌ ರಾಜ್‌ಭಾರ್‌ ಮತ್ತು ಉತ್ತಮ್‌ ಸಿಂಗ್‌ ಅವರಿಂದ ದಾಖಲಾದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next