Advertisement

ಶಿಕ್ಷಕನಿಗೆ ಏಷ್ಯಾಬುಕ್‌ ಆಫ್ ರೆಕಾರ್ಡ್ಸ್‌ ಪುರಸ್ಕಾರ

03:12 PM Feb 06, 2023 | Team Udayavani |

ಕೋಲಾರ: ವಿಜ್ಞಾನಿ ಆಗುವ ಕನಸು ಕಂಡು, ಕೊನೆಗೆ ಶಿಕ್ಷಕರಾಗಿ ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ವಿಜ್ಞಾನಿ ಆಗಿಸುವ ಕನಸು ಹೊತ್ತು ಶ್ರಮಿಸುತ್ತಿರು ವವರು ಕೋಲಾರದ ಸಂಪನ್ಮೂಲ ಶಿಕ್ಷಕ ಸಿ. ಮುನಿರಾಜುಗೆ ಏಷ್ಯಾಬುಕ್‌ ಆಫ್ ರೆಕಾರ್ಡ್‌ ಪುರಸ್ಕಾರ ದೊರೆತಿದೆ.

Advertisement

ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ತಂದೆ ಚಿನ್ನಾರಪ್ಪ ತಾಯಿ ರತ್ನಮ್ಮರ ಮೂರನೇ ಪುತ್ರ ಸಿ.ಮುನಿರಾಜುಗೆ ಬಾಲ್ಯದಿಂದಲೂ ವಿಜ್ಞಾನಿ, ಯೋಧ ಇಲ್ಲವೇ ಶಿಕ್ಷಕನಾಗಬೇಕು ಎಂಬ ಮೂರು ಕನಸಿತ್ತು. ಬಿಎಸ್‌ಸಿ, ಬಿಇಡಿ ಪೂರ್ಣಗೊಳಿಸಿ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದ ಮುನಿರಾಜು, ಬಡತನ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಳಿಸಿ ಡಿಇಡಿ ವಿದ್ಯಾರ್ಥಿಯಾದರು. 2006ರಲ್ಲಿ ಪೊಲೀಸ್‌ ಕೆಲಸಕ್ಕೆ ಆಯ್ಕೆಯಾಗಿ ತರಬೇತಿಯಲ್ಲಿದ್ದರು. ಅಷ್ಟರಲ್ಲಿ 2007ರಲ್ಲಿ ವಿಜ್ಞಾನ ಶಿಕ್ಷಕರಾದರು. ಈಗ ಕೋಲಾರ ತಾಲೂಕಿನ ಐತರಾಸಹಳ್ಳಿ ಸರ್ಕಾರಿ ಶಾಲೆಯಲ್ಲಿದ್ದು, ರಾಜ್ಯದ ಅತ್ಯುತ್ತಮ ವಿಜ್ಞಾನ ಶಿಕ್ಷಕರಾಗಿ ಗಮನ ಸೆಳೆಯುತ್ತಿದ್ದಾರೆ.

ರಾಜ್ಯ ಸಂಪ ನ್ಮೂಲ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆ ಆಗಿರುವ ವಿಜ್ಞಾನ, ಗಣಿತ ವಿಷಯವನ್ನು ತಾವೇ ತಯಾರಿಸಿದ ಕಲಿಕೋ ಪಕರಣಗಳ ಮೂಲಕ ಮಕ್ಕಳಿಗೆ ಕಲಿಸುವುದರಲ್ಲಿ ಸಿದ್ಧಹಸ್ತರು.

ಶಿಕ್ಷಕರಿಗೆ ಮಾದರಿ: ಕೊರೊನಾ ಕಾಲದಲ್ಲಿ ಸಮಯ ವ್ಯರ್ಥ ಮಾಡದೆ ಚಂದನ ವಾಹಿನಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಜ್ಞಾನ ಬೋಧಿಸಿದ್ದಾರೆ. ಗುರು ಚೇತನ ಕಾರ್ಯಕ್ರಮದಲ್ಲಿ 5 ವರ್ಷ ಕೆಲಸ ಮಾಡಿ ರಾಜ್ಯದ ಎಲ್ಲಾ ಶಿಕ್ಷಕರಿಗೆ ಬೋಧನಾ ತರಬೇತಿ ನೀಡಿದ್ದಾರೆ. ಸಂಚಲನ, ಸಮ್ಮಿಲನ, ವಿದ್ಯುತ್ಛಕ್ತಿ, ಗಾಳಿ ಒಂದು ಸಮನ್ವಯ ವಿಧಾನ ಹಾಗೂ ಮೌಲ್ಯ ಎಂಬ ಐದು ಮಾಡ್ನೂಲ್‌ಗ‌ಳನ್ನು ರಚಿಸಿ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ.

ಸಂಪನ್ಮೂಲ ವ್ಯಕ್ತಿ: ಮಕ್ಕಳ ವಿಜ್ಞಾನ ಹಬ್ಬ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಲಸ್ಟರ್‌, ಹೋಬಳಿ, ಜಿಲ್ಲಾ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಯಾಗಿ ಗಮನಸೆಳೆದಿದ್ದಾರೆ. ಎನ್‌ಸಿಇ ಆರ್‌ಟಿ, ಡಿಎಸ್‌ಇಆರ್‌ಟಿ ಪ್ರಾಯೋಜಿತ ಶಿಕ್ಷಕರಿಗೆ ತರಬೇತಿ ನೀಡುವ ನಿಷ್ಠಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ವಿಜ್ಞಾನ ಸೂತ್ರ: ಒಂದು ಸಾವಿರಕ್ಕೂ ಅಧಿಕ ಕಲಿಕೋಪಕರಣ ರೂಪಿಸಿರುವುದು ಇವರ ಹೆಗ್ಗಳಿಕೆ. ಮುನಿರಾಜು ಲ್ಯಾಬೋರೇಟರಿ ಹೆಸರಿನ ಯೂಟ್ಯೂಬ್‌ ಚಾನೆಲ್‌ ತೆರೆದು 500ಕ್ಕೂ ಹೆಚ್ಚು ವಿಜ್ಞಾನ ಪ್ರಯೋಗ ತಯಾರಿಸಿ, ಕನ್ನಡ ದಲ್ಲಿಯೇ ಅಪ್‌ಲೋಡ್‌ ಮಾಡಿದ್ದಾರೆ. ಈ ರೀತಿಯ ಇನ್ನೂ 1500 ಪ್ರಯೋಗ ಇವರ ಬತ್ತಳಿಕೆಯಲ್ಲಿದ್ದು, ಹಂತವಾಗಿ ಪೋಸ್ಟ್‌ ಮಾಡುವ ಮನಸಿದೆ ಎನ್ನುತಾರೆ ಮುನಿರಾಜು. ಅತ್ಯುತ್ತಮ ಪ್ರಯೋಗಾಲಯ: ಅಗಸ್ತ್ಯ ವಿಜ್ಞಾನ ಬಂಧು ಮತ್ತು ಟೀಚರ್‌ ಮಾಸ ಪತ್ರಿಕೆಗಳಲ್ಲಿ ಇವರ ಸಾಧನೆ ಕುರಿತ ಲೇಖನಗಳು ಪ್ರಕಟಗೊಂಡು ಇನ್ನಿತರ ವಿಜ್ಞಾನ ಶಿಕ್ಷಕರಿಗೆ ಸ್ಫೂರ್ತಿಯಾಗಿವೆ. ತಾನು ಪಾಠ ಮಾಡುತ್ತಿರುವ ಐತರಾಸನಹಳ್ಳಿ ಶಾಲೆಯಲ್ಲಿ ಮಾದರಿ ಯನ್ನಾಗಿಸಿ ಪ್ರೊಜೆಕ್ಟರ್‌ ಮೂಲಕ ಪಾಠ ಮಾಡುವು ದನ್ನು ನಿತ್ಯ ಅಭ್ಯಾಸವಾಗಿಸಿದ್ದಾರೆ. ಶಾಲೆಗೆ ತನ್ನದೇ ಹಾಗೂ ದಾನಿಗಳ ಸಹಕಾರದಿಂದ ಪೀಠೊಪಕರಣ ಒದಗಿಸಿದ್ದಾರೆ.

Advertisement

ಈಗ ಶಾಲೆಯಲ್ಲಿ ಅತ್ಯುತ್ತಮ ವಿಜ್ಞಾನ, ಗಣಿತ ಪ್ರಯೋಗಾಲಯ ರೂಪಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ಆಕರ್ಷಕ ಪುಷ್ಪ ಸಸ್ಯೋದ್ಯಾನ ನಿರ್ಮಿಸಿ, ಒಂದೆರೆಡು ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಗುರಿ ಹೊಂದಿದ್ದಾರೆ.

ಉಪನ್ಯಾಸದ ಮೂಲಕ ಸಾಧನೆ : ಜೆಸಿಐ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ 253 ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಏಕ ಕಾಲದಲ್ಲಿ ನಡೆಸಿದ ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನದಡಿ ಡಿಸಿಷನ್‌ ಮೇಕಿಂಗ್‌ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ ವಿಷಯ ಕುರಿತು ಉಪನ್ಯಾಸ ನೀಡಿ, ಏಷ್ಯನ್‌ ಬುಕ್‌ ಆಫ್ ರೆಕಾರ್ಡ್ಸ್‌ ನ ಭಾಗವಾಗಿ ಪ್ರಶಸ್ತಿ ಸ್ಪೀಕರಿಸಿದ್ದಾರೆ. ಈ ಯೋಜನೆ ಯಲ್ಲಿ ಭಾಗವಹಿಸಿದ ಕೋಲಾರ ಜಿಲ್ಲೆಯ ಏಕೈಕ ವಿಜ್ಞಾನ ಶಿಕ್ಷಕ ಮುನಿರಾಜು ಆಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಶಕ್ತಿ: ಸಹಪಠ್ಯ ಚಟುವಟಿಕೆಗಳ ಟಿಎಲ್‌ಎಂ ತಯಾ ರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ, ಅನೇಕ ಬಾರಿ ಪ್ರಶಸ್ತಿ ಗಳಿಸಿರುವ ಇವರು, 8 ಬಾರಿ ತಮ್ಮ ವಿದ್ಯಾರ್ಥಿಗಳಿಂದ ಇನ್ಸ್‌ಫೈರ್‌ ಅವಾರ್ಡ್‌ ಗೆಲ್ಲುವಂತೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ದರ್ಶನ್‌ಗೌಡ ಎಂಬ ವಿದ್ಯಾರ್ಥಿ ಮೂಲಕ ತಯಾರಿಸಿದ್ದ ಸೈಕಲ್‌ ವೀಡರ್‌-ಸೈಕಲ್‌ ಬಳಸಿ ಕೊಂಡು ಉಳುಮೆ, ಬಿತ್ತನೆ, ಕಳೆ ತೆಗೆಯುವ, ಮಣ್ಣು ಹದ ಮಾಡುವ, ಕೂರಿಗೆ ಮಾಡುವ ಸಾಧನದ ಮಾದರಿ ರಾಷ್ಟ್ರ ಮಟ್ಟದ ವಿಜ್ಞಾನ ಜಿಜ್ಞಾಸ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next