Advertisement

ಬೂಟುಗಾಲಿನಿಂದ ಒದ್ದ ಎಎಸ್‌ಐ ಅಮಾನತು

11:44 AM May 12, 2020 | Lakshmi GovindaRaj |

ಬೆಂಗಳೂರು: ಉತ್ತರ ಪ್ರದೇಶ ಮೂಲದ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಲು ಪೂರ್ವ ವಿಭಾಗದ ಕಾಡುಗೊಂಡನ ಹಳ್ಳಿ(ಕೆ.ಜಿ.ಹಳ್ಳಿ) ಠಾಣೆಗೆ ನೋಂದಣಿಗೆ ತೆರಳಿದ್ದಾಗ ಕಾರ್ಮಿಕರ ಮೇಲೆ ಬೂಟುಗಾಲಿನಿಂದ  ತುಳಿದು ದರ್ಪ ತೋರಿದ ಆರೋಪದಲ್ಲಿ ಎಎಸ್‌ಐ ರಾಜಸಾಬ್‌ ಅವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Advertisement

ಉತ್ತರ ಪ್ರದೇಶ ಮೂಲದ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ಸಲುವಾಗಿ ನೋಂದಣಿ ಮಾಡಿಸಿಕೊಳ್ಳಲು ಕಾಡುಗೊಂಡನಹಳ್ಳಿ ಪೊಲೀಸ್‌ ಠಾಣೆಗೆ ತೆರಳಿದ್ದರು. ಈ ವೇಳೆ, ಉತ್ತರ ಪ್ರದೇಶ ಮೂಲದ ಕಾರ್ಮಿಕರ ಮೇಲೆ ಅಲ್ಲಿನ  ಎಎಸ್‌ಐ ರಾಜಸಾಬ್‌ ಬೂಟುಕಾಲಿನಿಂದ ಒದ್ದು ದರ್ಪ ತೋರಿದ್ದರು.

ವಿಡಿಯೋ ವೈರಲ್‌: ಈ ಕುರಿತ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದ ಕೆಲವರು ಎಲ್ಲೆಡೆ ವೈರಲ್‌ ಮಾಡಿದ್ದರು. ಅದನ್ನು ಕೆಲ ನೆಟ್ಟಿಗರು ಟ್ವಿಟರ್‌ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌  ಮತ್ತು ವೈಟ್‌ ಫಿಲ್ಡ್ ಡಿಸಿಪಿ ಎಂ.ಎನ್‌.ಅನುಚೇತ್‌ ಅವರಿಗೆ ಟ್ಯಾಗ್‌ ಮಾಡಿ ಕಾರ್ಮಿಕರ ನೆರವಿಗೆ ಬರುವಂತೆ ಕೋರಿದ್ದರು. ಘಟನೆ ಬಗ್ಗೆ ತನಿಖೆ ನಡೆಸಿದ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಇದೀಗ ಎಎಸ್‌ಐ  ರಾಜಸಾಬ್‌ ಅವರನ್ನು ಅಮಾನತುಗೊಳಿಸಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next