ಎಚ್.ಡಿ.ಕೋಟೆ: ತಂದೆ ತಾಯಿಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಪೊಲೀಸ್ ಅಧಿಕಾರಿಯೊಬ್ಬರು ದತ್ತ ಪಡೆದು, ಅವರ ಬಾಳನ್ನು ಹಸನಾಗಿಸುವ ರಕ್ಷಕರಾಗಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಸ್ವಂತ ಹಣದಲ್ಲಿ ಅವರಿಗೆ ಸೂರನ್ನೂ ಕಲ್ಪಿಸಿದ್ದಾರೆ.
ತಾಲೂಕಿನ ಹಂಪಾಪುರ ಪೊಲೀಸ್ ಉಪ ಠಾಣೆ ಎಐಎಸ್ ಆಗಿರುವ ದೊರೆಸ್ವಾಮಿ ಈಮಹಾತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವಮೂಲಕ ಮಾದರಿಯಾಗಿದ್ದಾರೆ. ಈ ಕಾರ್ಯಕ್ಕೆ ಅವರ ಪತ್ನಿ ಚಂದ್ರಿಕಾ ಕೂಡ ಸಾಥ್ ನೀಡಿದ್ದಾರೆ.
ತಾಲೂಕಿನ ಶಿರಮಳ್ಳಿಯ ದೊಡ್ಡೇಗೌಡ- ಸಣ್ಣಮ್ಮ ದಂಪತಿ ಕಳೆದ 8 ವರ್ಷ ಹಿಂದೆನಿಧನರಾಗಿದ್ದರು.ಹೀಗಾಗಿಅವರಮಕ್ಕಳಾದ ಜ್ಯೋತಿ (17) ಮತ್ತು ಮಣಿ ಅನಾಥರಾಗಿದಿಕ್ಕು ತೋಚದಂತಾಗಿದ್ದರು. ಗ್ರಾಮದ ಒಬ್ಬರ ಸಹಕಾರದಿಂದ ಗ್ರಾಮದಲ್ಲಿದ ಶಿಥಿಲಾ ವಸ್ಥೆಯ ಮನೆಯೊಂದರಲ್ಲಿ ನೆಲೆಸಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ವಿಚಾರ ಎಎಸ್‌ಐ ದೊರೆಸ್ವಾಮಿಹಾಗೂ ಅವರ ಪತ್ನಿ ಚಂದ್ರಿಕಾಗೆ ತಿಳಿಯುತ್ತಿದ್ದಂತೆಯೇ ಖುದ್ದು ಗ್ರಾಮಕ್ಕೆ ಹೋಗಿ ಈ ಇಬ್ಬರು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡು ಇವರ ವಿದ್ಯಾಭ್ಯಾಸದಹೊಣೆ ವಹಿಸಿಕೊಂಡರು. ಜ್ಯೋತಿಯನ್ನು ಖಾಸಗಿ ಪಿಯು ಕಾಲೇಜಿಗೆ ದಾಖಲಿಸಿದ್ದಾರೆ.
ಆನ್‌ಲೈನ್ ತರಗತಿ ನೆರವಾಗಲು ಸ್ಮಾರ್ಟ್ ಫೋನ್‌ಕೊಡಿಸಿದ್ದಾರೆ. ಈ ಇಬ್ಬರು ಹೆಣ್ಣುಮಕ್ಕಳು ಶಿಥಿಲಾ ವಸ್ಥೆಯ ಮನೆಯಲ್ಲಿದ್ದರಿಂದ ಮರುಗಿದದೊರೆಸ್ವಾಮಿ, 2.50 ಲಕ್ಷ ರೂ. ವೆಚ್ಚದಲ್ಲಿಮನೆ ದುರಸ್ತಿಪಡಿಸಿ, ಹೊಸ ಸೂರನ್ನು ಕಲ್ಪಿಸಿದ್ದಾರೆ. ಸೋಮವಾರ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿಸಿದರು. ಬಂದ ಅತಿಥಿಗಳಿಗೆ ಬೆಳಗಿನ ಉಪಾಹಾರ ವ್ಯವಸ್ಥೆಯನ್ನೂ ಮಾಡಿದ್ದರು. ದೊರೆಸ್ವಾಮಿ ದಂಪತಿ ನೂತನ ಮನೆಯನ್ನುಹೆಣ್ಣುಮಕ್ಕಳಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.
ಸಮಾಜಮಖೀ ದೊರೆಸ್ವಾಮಿ : ಕೋವಿಡ್, ಲಾಕ್‌ಡೌನ್ ಅವಧಿಯಲ್ಲಿ ಎಎಸ್‌ಐ ದೊರೆಸ್ವಾಮಿ 25 ಸಾವಿರಕ್ಕೂ ಅಧಿಕ ಮಂದಿಗೆ ಉಚಿತ ಮಾಸ್ಕ್ವಿತರಣೆ, ಬಡವರಿಗೆ ಆಹಾರದ ಕಿಟ್ ಮತ್ತು ಶಾಲಾಕಾಲೇಜು ಗಳ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದ್ದಾರೆ. ಸಮಾಜಮುಖೀ ದೊರೆಸ್ವಾಮಿ ಸೇವಾಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರೆಂದರೆ ತುಸು ಭಯ ಪಡುವಂತಹ ಸನ್ನಿವೇಶದಲ್ಲಿ ದೊರೆಸ್ವಾಮಿ ಹಲವರ ಬದುಕಿಗೆ ವೈಯಕ್ತಿಕವಾಗಿ ನೆರವಾಗುವ ಮೂಲಕ ಔದಾರ್ಯ ಮೆರೆದಿದ್ದಾರೆ.
– ಎಚ್.ಬಿ. ಬಸವರಾಜು