Advertisement

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

08:33 PM Oct 16, 2021 | Team Udayavani |

ದುಬೈ: ನವೋದ್ಯಮಗಳ ತೊಟ್ಟಿಲಾಗಿರುವ ಕರ್ನಾಟಕವು ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ತಂತ್ರಜ್ಞಾನವನ್ನು ಆಧರಿಸಿದ ಹಲವು ಕ್ಷೇತ್ರಗಳಲ್ಲಿ ಸಮರ್ಥ ಪರಿಹಾರಗಳನ್ನು ಒದಗಿಸಲು ಉತ್ಸುಕವಾಗಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಶನಿವಾರ ಇಲ್ಲಿ ಆರಂಭವಾದ `ವರ್ಲ್ಡ್ ದುಬೈ ಎಕ್ಸ್-ಪೋ-2020’ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ನವೋದ್ಯಮಗಳು ಯುಎಇಯಲ್ಲಿ ಸಾಗಣೆ, ಆರೋಗ್ಯ ಸೇವೆ, ತ್ಯಾಜ್ಯ ನಿರ್ವಹಣೆ ಮತ್ತು ಮೂಲಸೌಲಭ್ಯ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ನೆರವಿಗೆ ಬರಲಿವೆ’ ಎಂದರು.

ಉದ್ಘಾಟನಾ ಕಾರ್ಯಕ್ರಮ ದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೇರಿದಂತೆ ‌ಇತರ ಹಿರಿಯ ಅಧಿಕಾರಿಗಳು ಇದ್ದರು.

ದುಬೈ ಎಕ್ಸ್ ಪೋ-2020ರಲ್ಲಿ ಭಾಗವಹಿಸಿ, ರಾಜ್ಯಕ್ಕೆ ಉದ್ಯಮಿಗಳನ್ನು ಹೂಡಿಕೆ ಮಾಡುವಂತೆ ಆಹ್ವಾನಿಸಲು ಬಂದಿರುವ ಕರ್ನಾಟಕ ಸರಕಾರದ ನಿಯೋಗದಲ್ಲಿ ಅಶ್ವತ್ಥನಾರಾಯಣ ಅವರೂ ಇದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಸಾಮರ್ಥ್ಯದ ಆರ್ಥಿಕ ಶಕ್ತಿಯಾಗಿ ಬೆಳೆಸುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕರ್ನಾಟಕವು ತಂತ್ರಜ್ಞಾನವನ್ನು ಆಧರಿಸಿದ ಎಲ್ಲ ಉಪಕ್ರಮಗಳನ್ನೂ ಕೈಗೊಂಡಿದೆ. ಯುಎಇಯಲ್ಲಿರುವ ಉದ್ಯಮಿಗಳು ಕರ್ನಾಟಕಕ್ಕೆ ಬಂದು ಹೂಡಿಕೆ ಮಾಡಲು ಮುಕ್ತ ಸ್ವಾಗತವಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಆಹ್ವಾನವಿತ್ತರು.

Advertisement

ಐಐಎಸ್ಸಿ, ಐಐಎಂ, ಐಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜ್ಯವು ಹೊಂದಿದೆ. ಇದರ ಜತೆಗೆ ಕರ್ನಾಟಕವು ಐಟಿ, ಬಿಟಿ, ಇಎಸ್ ಡಿಎಂ, ಅನಿಮೇಷನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಇನ್ನೂ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯನೀತಿಗಳನ್ನು ಹೊಂದಿದೆ. ಅಲ್ಲದೆ, ನಮ್ಮಲ್ಲಿಗೆ ಬರುವ ಉದ್ದಿಮೆಗಳಿಗೆ ಆಕರ್ಷಕ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳನ್ನು ನೀಡುವುದಕ್ಕೆ ರಾಜ್ಯ ಸರಕಾರವು ಒತ್ತು ಕೊಡುತ್ತದೆ ಎಂದು ಅವರು ವಿವರಿಸಿದರು

ಇದನ್ನೂ ಓದಿ :ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

Advertisement

Udayavani is now on Telegram. Click here to join our channel and stay updated with the latest news.

Next