ನವದೆಹಲಿ: ಏಕ್ ಭಾರತ್ ಶ್ರೇಷ್ಠ್ ಭಾರತ್ ಯೋಜನೆಯ ಅಡಿಯಲ್ಲಿ ಗುಜರಾತ್‌ನ ಪಾರಂಪರಿಕ, ಪ್ರವಾಸಿ ತಾಣಗಳನ್ನು ಬೆಸೆಯುವ ʻಗರ್ವಿ ಗುಜರಾತ್ʼ ರೈಲು ಪ್ರವಾಸಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ಭಾರತ್ ಗೌರವ್ ಡಿಲಕ್ಸ್ ಎ\ಸಿ ಪ್ರವಾಸಿ ರೈಲಿನಲ್ಲಿ ಸಾಗುವ 8 ದಿನಗಳ ರೈಲು ಯಾತ್ರೆಗೆ ಚಾಲನೆ ನೀಡಿದಂತಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸೂಖ್ ಮಾಡವೀಯ ಮತ್ತು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಜಿ. ಕಿಶನ್ ರೆಡ್ಡಿ ಭಾಗಿಯಾಗಿದ್ದರು.
ʻಗರ್ವಿ ಗುಜರಾತ್ʼ ಹೆಸರಲ್ಲಿ ಫೆ.28 ರಂದು ದೆಹಲಿಯ ಸಫ್‌ದಾರ್‌ಜಂಗ್ ರೈಲ್ವೇ ನಿಲ್ದಾಣದಿಂದ ಹೊರಡಲಿರುವ ರೈಲು ಪ್ರವಾಸ 8 ದಿನಗಳ ಕಾಲ ಗುಜರಾತ್‌ನ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಬೆಸೆದು ಗುಜರಾತ್‌ನ ದ್ವಾರಕಾ ರೈಲ್ವೇ ನಿಲ್ದಾಣದಲ್ಲಿ ಕೊನೆಯಾಗಲಿದೆ.
ಸಂಚಾರ ಮಧ್ಯದಲ್ಲಿ ಈ ರೈಲು ಗುರುಗ್ರಾಮ, ರೆವಾರಿ, ರಿಂಗಾಸ್, ಫುಲೆರಾ ಮತ್ತು ಅಜ್ಮೀರ್ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಅಲ್ಲದೇ, ಈ ಯಾತ್ರೆಯು ಗುಜರಾತ್‌ನ ಪ್ರಮುಖ ಪ್ರವಾಸಿ ತಾಣಗಳಾದ ಐಕ್ಯತಾ ಪ್ರತಿಮೆ, ಸೋಮನಾಥ್ ದೇವಾಲಯ, ದ್ವಾರಕಾ, ನಾಗೇಶ್ವರ್, ಅಹ್ಮದಾಬಾದ್, ಮೊಧೇರಾ ಮತ್ತು ಪಾಟಾಣ್ ಪ್ರದೇಶಗಳನ್ನು ಬೆಸೆಯಲಿದೆ.
ಇದನ್ನೂ ಓದಿ:
ಜಿ-20 ಶೃಂಗಸಭೆಗಾಗಿ ತಂದಿದ್ದ ಹೂವಿನ ಕುಂಡಗಳನ್ನು ಐಷಾರಾಮಿ ಕಾರಿನಲ್ಲಿ ಬಂದು ಕದ್ದೊಯ್ದರು