Advertisement

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕಪ್ ಗೆದ್ದು ಇತಿಹಾಸ ಬರೆದ ಮಾಜಿ ಕ್ರಿಕೆಟರ್ ಆಶ್ಲಿ ಬಾರ್ಟಿ

04:50 PM Jan 29, 2022 | Team Udayavani |

ಮೆಲ್ಬೋರ್ನ್: ವಿಶ್ವದ ಅಗ್ರ ಶ್ರೇಯಾಂಕದ ಟೆನ್ನಿಸ್ ಆಟಗಾರ್ತಿ, ಆಸೀಸ್ ನ ಆಶ್ಲಿ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕೂಟವನ್ನು ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧ ಜಯ ಸಾಧಿಸಿದರು. ಈ ವಿಜಯದಿಂದ 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಮಹಿಳಾ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಆಟಗಾರ್ತಿ ಗೆದ್ದಂತಾಯಿತು.

Advertisement

1978 ರಲ್ಲಿ ಕ್ರಿಸ್ ಓ’ನೀಲ್ ಮಹಿಳಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಬಳಿಕ ಯಾವುದೇ ಆಸೀಸ್ ಆಟಗಾರ್ತಿ ಆಸ್ಟ್ರೇಲಿಯನ್ ಓಪನ್ ಕಪ್ ಗೆದ್ದಿಲ್ಲ.

ಇದು 2019 ರ ಫ್ರೆಂಚ್ ಓಪನ್ ಮತ್ತು 2021 ರ ವಿಂಬಲ್ಡನ್ ಗೆದ್ದಿರುವ ಬಾರ್ಟಿ ಅವರ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.

ಇದನ್ನೂ ಓದಿ:ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ  ಸೇಡಿನ ಪಂದ್ಯ

ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಆಶ್ಲಿ ಬಾರ್ಟಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು 6-3 7-6(2) ಸೆಟ್‌ಗಳಿಂದ ಸೋಲಿಸಿ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.

Advertisement

ಮಾಜಿ ಕ್ರಿಕೆಟರ್: 2011ರಲ್ಲಿ ಟೆನಿಸ್‌ ಆರಂಭಿಸಿದ ಆ್ಯಶ್ಲಿ ಬಾರ್ಟಿ, ಜೂನಿಯರ್‌ ಮಟ್ಟದಲ್ಲಿ ಯಶಸ್ಸು ಕಾಣದೆ ಕ್ರಿಕೆಟ್‌ನತ್ತ ಒಲವು ತೋರಿದ್ದರು. 2015-16ರ ವನಿತಾ ಬಿಗ್‌ ಬಾಶ್‌ ಲೀಗ್‌ನಲ್ಲೂ ಆಡಿದ್ದರು. ಬ್ರಿಸ್ಬೇನ್‌ ಹೀಟ್‌ ಪರ ಮೊದಲ ಪಂದ್ಯದಲ್ಲಿ 27 ಎಸೆತಗಳಿಂದ 39 ರನ್‌ ಬಾರಿಸಿದ ಹೆಗ್ಗಳಿಕೆ ಬಾರ್ಟಿ ಅವರದಾಗಿತ್ತು. 2015ರಲ್ಲಿ ಕ್ವೀನ್ಸ್‌ಲ್ಯಾಂಡ್‌ ಪರ ಲಿಸ್ಟ್‌ ಎ ಪಂದ್ಯವನ್ನೂ ಆಡಿದ್ದರು. ಆದರೆ ಮರು ವರ್ಷವೇ ಕ್ರಿಕೆಟ್‌ ಬಿಟ್ಟು ಮತ್ತೆ ಟೆನಿಸ್‌ ರ್ಯಾಕೆಟ್‌ ಹಿಡಿಯತೊಡಗಿದರು. ಮುಂದಿನದು ಇತಿಹಾಸ.

Advertisement

Udayavani is now on Telegram. Click here to join our channel and stay updated with the latest news.

Next