ಬೆಂಗಳೂರು: ಹೊಸ ವರ್ಷದ ಮೊದಲ ತಿಂಗಳು ಆರೋಗ್ಯ ಕಾರ್ಯಕರ್ತರ ಪಾಲಿಗೆ ಸವಾಲಿನದಾಗಿದ್ದು, ಒಂದಲ್ಲಾ ಎರಡಲ್ಲಾಒಟ್ಟಾರೆ ನಾಲ್ಕು ಪ್ರಕಾರದ ಲಸಿಕೆಗಳನ್ನು ವಿವಿಧ ವರ್ಗಗಳಿಗೆ ನೀಡುವ ಹೊಣೆ ಆ ಕಾರ್ಯಕರ್ತರ ಮೇಲಿದೆ!
ಈಗಾಗಲೇ ನಿತ್ಯ ಸಾವಿರಾರು ಜನರಿಗೆ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ನೀಡುತ್ತಿದ್ದಾರೆ. ಜ. 3ರಿಂದ 15ರಿಂದ 18 ವರ್ಷದ ಒಳಗಿನವರು ಈ ಲಸಿಕೆ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಬೆನ್ನಲ್ಲೇ ಜ. 10ರಿಂದ 60 ವರ್ಷ ಮೇಲ್ಪಟ್ಟ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿದೆ. ಈ ಮಧ್ಯೆ ಮಕ್ಕಳಿಗೆ ಜ. 23ರಿಂದ ಪಲ್ಸ್ ಪೋಲಿಯೋ ಲಸಿಕೆ ಕೂಡ ವಿತರಿಸಬೇಕಾಗಿದೆ. ಇದರೊಂದಿಗೆ ಒಮಿಕ್ರಾನ್ ಪ್ರಕರಣಗಳು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಇದೆಲ್ಲವೂ ಪ್ರಮುಖವಾಗಿದ್ದು, ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿ ಎದುರು ನೋಡಲಾಗುತ್ತಿದೆ. ಈ ಮಧ್ಯೆ ಒಮಿಕ್ರಾನ್ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ವಿಧಿಸಿರುವುದು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಸರಿಸುಮಾರು ವರ್ಷದಿಂದ ನಿರಂತರವಾಗಿ ನಗರದಾದ್ಯಂತ ಆಶಾ ಕಾರ್ಯಕರ್ತರು, ಸಹಾಯಕ ಶುಶ್ರೂಷಕಿಯರು ಕೋವಿಡ್‌ಲಸಿಕೆ ವಿತರಣೆಯಲ್ಲಿ ಸಕ್ರಿಯರಾಗಿದ್ದಾರೆ. ನಿತ್ಯ ಹತ್ತಾರು ಕಿ.ಮೀ.ನಡೆದು ಮನೆ-ಮನೆಗೆ ತೆರಳಿ ಲಸಿಕೆ ನೀಡುತ್ತಿದ್ದರೂ ಗುರಿ ತಲು ಪಲು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಜನ ಇನ್ನೂ ಮೊದಲ ಡೋಸ್ ನಿಂದಲೇ ದೂರ ಉಳಿದಿದ್ದಾರೆ. ಈ ನಡುವೆ ಮತ್ತೆ ಮೂರುವರ್ಗಗಳಿಗೆ ಲಸಿಕೆ ವಿತರಣೆ ಆರೋಗ್ಯ ಕಾರ್ಯಕರ್ತರ ಮೇಲಿದ್ದು,ಈ ಒತ್ತಡ ನಿಭಾಯಿಸಲು ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಇನ್ನಿಲ್ಲದ ಕಸರತ್ತು ನಡೆದಿದೆ.
ಯಾರು ಮತ್ತು ಎಷ್ಟು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 850 ಆಶಾ ಕಾರ್ಯಕರ್ತರಿದ್ದು, 300ಕ್ಕೂ ಅಧಿಕ ಸಹಾಯಕಶುಶ್ರೂಷಕಿಯರಿದ್ದಾರೆ. ಜತೆಗೆ ವೈದ್ಯಕೀಯ ಸಿಬ್ಬಂದಿ ಕೂಡಇದ್ದಾರೆ. ಇವರಲ್ಲಿ ಪ್ರತಿಯೊಬ್ಬರು ದಿನಕ್ಕೆ 250-300 ಕೋವಿಡ್ ಲಸಿಕೆ ನೀಡುತ್ತಿದ್ದಾರೆ. ಇದೇ ತಂಡವು 60 ವರ್ಷ ಮೇಲ್ಪಟ್ಟಸುಮಾರು 20 ಲಕ್ಷ ಜನರಿಗೆ ಬೂಸ್ಟರ್ ಡೋಸ್ ಹಾಗೂ 15-18ವರ್ಷದ ಒಳಗಿನ ಅಂದಾಜು 7ರಿಂದ 7.5 ಲಕ್ಷ ಮಂದಿಗೆ ಲಸಿಕೆನೀಡಬೇಕಾಗಿದೆ. ಇನ್ನು 0-5 ವರ್ಷದ ಒಳಗಿನ ಮಕ್ಕಳು ನಗರದಲ್ಲಿ7-8 ಲಕ್ಷ ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಎಲ್ಲವರ್ಗವನ್ನು ನಿಗದಿತ ಅವಧಿಯಲ್ಲಿ ತಲುಪುವುದು ಸಹಜವಾಗಿಸವಾಲಿನ ಕೆಲಸ. ಆದರೆ, ಪಲ್ಸ್ ಪೋಲಿಯೋ ಅಭಿಯಾನಕ್ಕೆವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳಿಂದ ವಿದ್ಯಾರ್ಥಿಗಳ ನೆರವು ಪಡೆಯಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
15 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ : ಪಲ್ಸ್ ಪೋಲಿಯೋ ಲಸಿಕೆ ಅಷ್ಟಾಗಿ ಸಮಸ್ಯೆಆಗದಿರಬಹುದು. ಆದರೂ ಅಭಿಯಾನಕ್ಕೆ ಪೂರ್ವತಯಾರಿಅತ್ಯಗತ್ಯ. ಲಸಿಕೆಯನ್ನು ವಿವಿಎಂನಲ್ಲಿ 8 ಡಿಗ್ರಿಗಿಂತ ಕಡಿಮೆತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆಜ್ವರ ಇದ್ದರೆ ಹಾಕಬೇಕೇ ಅಥವಾ ಬೇಡವೇ ಎಂಬುದನ್ನು ತಿಳಿದುಕೊಳ್ಳಬೇಕು, ಮನೆ-ಮನೆಗೆ ಭೇಟಿ ನೀಡಿದಾಗ ಗುರುತು ಹಾಕಿ ಬರಬೇಕು, ಬ್ಯಾಲನ್ಸ್‌ಶೀಟ್‌ನಲ್ಲಿದಾಖಲಿಸಿಕೊಳ್ಳುವುದು ಸೇರಿದಂತೆ ಹಲವು ಜವಾಬ್ದಾರಿಗಳು ಇರುತ್ತವೆ. ಈ ಬಗ್ಗೆ ತರಬೇತಿಯೂ ಅಗತ್ಯ. ಇದಕ್ಕಾಗಿಸುಮಾರು 15 ಸಾವಿರ ವಿದ್ಯಾರ್ಥಿಗಳ ನೆರವು
ಪಡೆಯಲಾಗುವುದು. ಜ. 23ರಿಂದ ನಾಲ್ಕು ದಿನಗಳ ಕಾಲಈ ಅಭಿಯಾನ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾಹಿತಿ ನೀಡಿದರು.ಇನ್ನು ಬೂಸ್ಟರ್ ಡೋಸ್ ಮತ್ತು 15-18 ವರ್ಷದ ಮಕ್ಕಳಿಗೆಲಸಿಕೆ ನೀಡಲು ಮಾರ್ಗಸೂಚಿ ಬರಲಿದೆ. ಅದನ್ನು ಆಧರಿಸಿಯೋಜನೆ ರೂಪಿಸಿಕೊಳ್ಳಲಾಗುವುದು. ಆದರೆ, ಎಲ್ಲರಿಗೂಒಮ್ಮೆಲೆ ಲಸಿಕೆ ಕೊಡುವುದಿಲ್ಲ. ದಿನಕ್ಕೆ ಗುರಿನಿಗದಿಪಡಿಸಿಕೊಂಡು, ಅದರಂತೆ ಅನುಷ್ಠಾನಗೊಳಿಸಲಾಗುವುದು ಎಂದರು.
-ವಿಜಯಕುಮಾರ ಚಂದರಗಿ