ಲಾಹೋರ್: ಒಂದು ಕಾಲದಲ್ಲಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯ ನಿರ್ಹಹಿಸಿದ್ದ ಮಾಜಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಅಸದ್ ರೌಫ್ ಸದ್ಯ ಲಾಹೋರ್ ನ ಮಾರುಕಟ್ಟೆಯಲ್ಲಿ ಅಂಗಡಿ ನಡೆಸುತ್ತಿದ್ದಾರೆ.
ವಿಶ್ವಕಪ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಅನುಭವಿ ಅಂಪೈರ್ ಅಸದ್ ರೌಫ್ ಅವರ ವೃತ್ತಿ ಜೀವನ ಮ್ಯಾಚ್ ಫಿಕ್ಸಿಂಗ್ ಆರೋಪದ ಬಳಿಕ ಮಂಕಾಗಿತ್ತು. 2013ರ ಆವೃತ್ತಿಯ ಐಪಿಎಲ್ ನಲ್ಲಿ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸುವುದರ ಜೊತೆಗೆ ಬುಕ್ಕಿಗಳಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪವನ್ನು ರೌಫ್ ಎದುರಿಸಿದ್ದರು.
2016ರಲ್ಲಿ ಬಿಸಿಸಿಐ ಅಸದ್ ರೌಫ್ ಅವರನ್ನು ಬ್ಯಾನ್ ಮಾಡಿತ್ತು. ಆದರೆ ರೌಫ್ ಈಗಲೂ ಈ ಆರೋಪಗಳನ್ನು ನಿರಾಕರಿಸುತ್ತಾರೆ. “ನನಗೂ ಈ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ. ಬಿಸಿಸಿಐ ಕಡೆಯಿಂದ ಈ ಆರೋಪ ಮಾಡಲಾಗಿತ್ತು. ನಂತರ ಅವರೇ ಸ್ವತಃ ನಿರ್ಧಾರ ಕೈಗೊಂಡಿದ್ದರು” ಎನ್ನುತ್ತಾರೆ ರೌಫ್.
ಇದನ್ನೂ ಓದಿ:ಸುಪ್ರೀಂ ಕ್ಲೀನ್ ಚಿಟ್: ಮೋದಿಜೀ ಯಾವುದೇ ನಾಟಕ ಮಾಡಿಲ್ಲ- ರಾಹುಲ್ ಗೆ ಶಾ ತಿರುಗೇಟು
ಅಸದ್ ರೌಫ್ ಸದ್ಯ ಲಾಹೋರ್ ನ ಲಂಡಾ ಬಜಾರ್ ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಪಾಕಿಸ್ಥಾನದ ಸುದ್ದಿಸಂಸ್ಥೆಯೊಂದು ಅವರ ಸಂದರ್ಶನ ನಡೆಸಿದೆ. ಮುಂದೆ ಅಂಪೈರಿಂಗ್ ಮಾಡುವುದಿಲ್ಲವೇ ಎಂದು ಕೇಳಿದಾಗ, “ಇಲ್ಲ, 2013ರಿಂದಲೂ ನಾನು ಆಟದಿಂದ ದೂರವಾಗಿದ್ದೇನೆ. ಅದರಿಂದ ಸಂಪೂರ್ಣವಾಗಿ ದೂರವಾಗಿದ್ದೇನೆ” ಎಂದಿದ್ದಾರೆ.
2013ರಲ್ಲಿ ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದ ಬಳಿಕ ಬಿಸಿಸಿಐ ಮತ್ತು ಐಪಿಎಲ್ ನಲ್ಲಿ ಅಮೂಲಾಗ್ರ ಬದಲಾವಣೆಗಳಾದವು.