Advertisement

ಎಲ್‌ಐಸಿ ಷೇರು ಮಾರಲು ಕೇಂದ್ರ ಭರ್ಜರಿ ತಯಾರಿ

09:31 AM Jan 12, 2022 | Team Udayavani |

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದೇ ಮೊದಲ ಬಾರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.

Advertisement

ಕೇಂದ್ರ ಸರ್ಕಾರ ಮಾಲಿಕತ್ವದ ಈ ಸಂಸ್ಥೆ ಐಪಿಒ (ಆರಂಭಿಕ ಷೇರು ಮಾರಾಟ) ಮೂಲಕ 40,000 ಕೋಟಿ ರೂ.ನಿಂದ 1 ಲಕ್ಷ ಕೋಟಿ ರೂ.ವರೆಗೆ ಸಂಗ್ರಹಿಸುವ ಗುರಿ ಹೊಂದಿದೆ. ಅದಕ್ಕಾಗಿ ಹಲವಾರು ನಿಯಮಗಳನ್ನು ಬದಲಿಸಲು ಹೊರಟಿದೆ. ಹಾಗೆಯೇ ಇದನ್ನು ಪ್ರಚಾರ ಮಾಡಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ.

ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವುದು, ಸುದ್ದಿಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಸೇರಿದಂತೆ ಎಲ್ಲ ಆಧುನಿಕ ಮಾರ್ಗಗಳ ಮೂಲಕ ಷೇರು ಮಾರಾಟ ಪ್ರಕ್ರಿಯೆ ಭಾರೀ ಯಶಸ್ಸು ಕಾಣಲು ಪ್ರಯತ್ನಿಸುತ್ತಿದೆ. ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ ವಿದೇಶಿ ಹೂಡಿಕೆದಾರರೂ ಷೇರು ಖರೀದಿಸಲು ಇಲ್ಲಿ ಅವಕಾಶ ನೀಡಲಾಗಿದೆ. ಅದಕ್ಕಾಗಿ ಈಗಿರುವ ನಿಯಮಗಳನ್ನು ಪರಿಶೀಲಿಸಿ, ಬದಲಿಸಲು ತೀರ್ಮಾನಿಸಲಾಗಿದೆ. ಇದುವರೆಗೆ ಈಕ್ವಿಟಿ ಷೇರುಗಳನ್ನು ವಿದೇಶೀಯರಿಗೆ ಮಾರಲು ಭಾರತದ ಎಲ್ಲ ಇತರೆ ವಿಮಾ ಕಂಪನಿಗಳಿಗೆ ಅವಕಾಶವಿತ್ತು, ಎಲ್‌ಐಸಿಗೆ ಮಾತ್ರ ಈ ಅವಕಾಶವಿರಲಿಲ್ಲ.

ಈಗ ವಿದೇಶೀಯರಿಗೆ ಷೇರು ಖರೀದಿಸಲು ಅವಕಾಶ ನೀಡಿರುವುದರಿಂದ ಎಲ್‌ಐಸಿ ಮೇಲೆ ವಿದೇಶೀ ಹೂಡಿಕೆದಾರರಿಗೆ ಹೆಚ್ಚಿನ ಅಧಿಕಾರ ಹೊಂದಲೂ ಅವಕಾಶ ನೀಡಿದಂತಾಗುತ್ತದೆ. ಈ ಹಿಂದೆ 2010ರಲ್ಲಿ ಕೇಂದ್ರ ಸರ್ಕಾರ ಶೇ.10 ಕೋಲ್‌ ಇಂಡಿಯಾ ಷೇರುಗಳನ್ನು ಮಾರಾಟ ಮಾಡಿತ್ತು. ಆದರೆ ಅದರ ಷೇರುಗಳಿಗೆ ಪ್ರಸ್ತುತ ಹೇಳಿಕೊಳ್ಳುವ ಮೌಲ್ಯವಿಲ್ಲ. ಈ ಹಳೆಯ ತಪ್ಪುಗಳಿಂದ ಸರ್ಕಾರ ಪಾಠ ಕಲಿಯಬೇಕೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next