Advertisement

ಹೊಸ ವರ್ಷಕ್ಕೆ ರಜನಿ ಪಕ್ಷ?

07:39 AM Dec 23, 2017 | Team Udayavani |

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ಅವರ ರಾಜಕೀಯ ಪ್ರವೇಶ ಕುರಿತಂತೆ ಎದ್ದಿರುವ ಊಹಾಪೋಹಗಳಿಗೆ ಶೀಘ್ರವೇ ತೆರೆ ಬೀಳಲಿದೆ. ಇದೇ ಮಾಸಾಂತ್ಯಕ್ಕೆ ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಖುದ್ದು ರಜನಿ ಕಾಂತ್‌ ಅವರೇ ಪ್ರಕಟನೆ ನೀಡಲಿದ್ದಾರೆಂದು ರಜನಿ ಆಪ್ತ ಸಲಹೆಗಾರ ಹಾಗೂ ಗಾಂಧಿಯ ಮಕ್ಕಳ ಇಳಕ್ಕಂ ಮಣಿಯನ್‌ ಪಕ್ಷದ ಸಂಸ್ಥಾಪಕರಾದ ತಮಿಳರುವಿ ಮಣಿಯನ್‌ ತಿಳಿಸಿರುವುದಾಗಿ “ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

Advertisement

ಶುಕ್ರವಾರ ಬೆಳಗ್ಗೆ ಪೋಯೆಸ್‌ ಗಾರ್ಡನ್‌ನಲ್ಲಿರುವ ರಜನಿಕಾಂತ್‌ ಮನೆಯಲ್ಲಿ ರಜನಿ ಹಾಗೂ ಮಣಿಯನ್‌ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಭೆಯ ಅನಂತರ ಪ್ರತಿಕ್ರಿಯಿಸಿರುವ ಮಣಿಯನ್‌, “”ಇದೇ ತಿಂಗಳ 26ರಿಂದ 31ರವರೆಗೆ ತಮ್ಮ ಅಭಿಮಾನಿಗಳನ್ನು ರಜನಿ ಭೇಟಿ ಮಾಡಿ, ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಇದು ಅವರ 2ನೇ ಭೇಟಿ. ಆ 6 ದಿನಗಳ ಭೇಟಿಯ ಅನಂತರ ಕೊನೆಯ ದಿನ (ಡಿ. 31) ರಜನಿಕಾಂತ್‌, ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಸ್ಪಷ್ಟವಾದ ಚಿತ್ರಣ ನೀಡಲಿದ್ದಾರೆ” ಎಂದು ಹೇಳಿದ್ದಾರೆ.

ಸಿಬಿಐ ವಿಶೇಷ ಕೋರ್ಟ್‌ 2ಜಿ ಹಗರಣದ ಆರೋಪಗಳಿಂದ ಡಿಎಂಕೆ ನಾಯಕರಾದ ಎ.ರಾಜಾ ಹಾಗೂ ಕನ್ನಿಮೋಳಿ ಅವರನ್ನು ದೋಷಮುಕ್ತರನ್ನಾಗಿಸಿರುವ, ಆರ್‌.ಕೆ.ನಗರ ಕ್ಷೇತ್ರದ ಉಪಚುನಾವಣೆ ವಿಚಾರ ಚರ್ಚೆಯಾಗಿದೆ ಎಂದು ಹೇಳಲಾಗಿದೆ.  ಆದರೆ ಮಣಿಯನ್‌ ಅದನ್ನು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next