ನವದೆಹಲಿ:ದಿನಂಪ್ರತಿ ತೈಲ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಸಾರ್ವಜನಿಕರು ಅಸಮಧಾನವ್ಯಕ್ತಪಡಿಸುತ್ತಿರುವ ನಡುವೆಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ (ಮಾರ್ಚ್ 30) ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ ಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ಗಾಳಿ ಮಳೆಗೆ ಸಾಲು ಮರದ ತಿಮ್ಮಕ್ಕ ಬೆಳೆಸಿದ್ದ ಬೃಹತ್ ಆಲದ ಮರ ಧರೆಗೆ : ರಸ್ತೆ ಸಂಚಾರ ಬಂದ್
ಪ್ರಾಯೋಗಿಕವಾಗಿ ದೇಶದ ಮೊಟ್ಟ ಮೊದಲ ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನ್ನು ತಮ್ಮ ಮನೆಯಿಂದ ಸಂಸತ್ ಭವನದವರೆಗೆ ಚಲಾಯಿಸಿಕೊಂಡು ಬಂದಿರುವುದಾಗಿ ವರದಿ ವಿವರಿಸಿದೆ.
ಟೊಯೊಟೊ ಮಿರ್ರೈ ವಾಹನವು ಹೈಡ್ರೋಜನ್ ಇಂಧನ ಸೆಲ್ ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಿದ್ದು, ಇದು ಒಂದು ಗಂಟೆಯ ಚಾರ್ಜ್ ನಲ್ಲಿ 600 ಕಿಲೋ ಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ಕಿಲೋ ಮೀಟರ್ ಸಂಚಾರಕ್ಕೆ ಕೇವಲ 2 ರೂಪಾಯಿ ವೆಚ್ಚವಾಗಲಿದೆ.
ಇದು ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ಕಾರು ಇದಾಗಿದ್ದು, ಈ ಕಾರಿನ ವೈಶಿಷ್ಟ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಸಂಸತ್ ಗೆ ಆಗಮಿಸಿರುವುದಾಗಿ ಸಚಿವ ಗಡ್ಕರಿ ಮಾಹಿತಿ ನೀಡಿದ್ದಾರೆ.
ನಿತಿನ್ ಗಡ್ಕರಿಯವರು ಹೈಡ್ರೋಜನ್ ಕಾರಿನ ಚಾಲಕನ ಪಕ್ಷ ಕುಳಿತಿದ್ದು, ಕಾರು ಬಿಳಿ ಬಣ್ಣದ್ದಾಗಿದೆ. ಹಸಿರು ನಂಬರ್ ಪ್ಲೇಟ್ ಬಳಕೆ ಮಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಖುದ್ದಾಗಿ ತಾವೇ ಹೈಡ್ರೋಜನ್ ಕಾರನ್ನು ಬಳಕೆ ಮಾಡುವುದಾಗಿ ನಿತಿನ್ ಗಡ್ಕರಿ ಜನವರಿಯಲ್ಲಿ ಘೋಷಿಸಿದ್ದರು. ಜಪಾನ್ ನ ಟೋಯೊಟಾ ಕಂಪನಿ ನನಗೆ ಸಂಚರಿಸಲು ಗ್ರೀನ್ ಹೈಡ್ರೋಜನ್ ಕಾರನ್ನು ನೀಡಿದ್ದು, ತೈಲ ಬಳಕೆ ಬದಲು ಪೈಲಟ್ ಪ್ರಾಜೆಕ್ಟ್ ಭಾಗವಾಗಿ ಈ ಹೈಡ್ರೋಜನ್ ಕಾರನ್ನು ಬಳಸುವುದಾಗಿ ಸಚಿವ ಗಡ್ಕರಿ ತಿಳಿಸಿದ್ದರು.