Advertisement

ಏಳು-ಬೀಳಿನ ಕಠಿಣ ಹಾದಿ ಸವೆಸಿದ ಫೇಸ್ ಬುಕ್ ಗೆ 17 ವರ್ಷದ ಸಂಭ್ರಮ!

12:47 PM Feb 05, 2021 | Team Udayavani |

ನವದೆಹಲಿ: ಹಾರ್ವರ್ಡ್ ಡಾರ್ಮ್ ರೂಮ್ ನಿಂದ ನೇರ ಪ್ರಸಾರವಾಗಿ ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ ಬುಕ್ ಗೆ 17 ವರ್ಷ ತುಂಬಿದೆ. ಫೇಸ್ ಬುಕ್ ನಡೆದು ಬಂದ 17 ವರ್ಷಗಳು ಕಷ್ಟಕರ ಪಯಣ, ಅನೇಕ ಏಳು ಬೀಳುಗಳನ್ನು ಕಂಡಿದೆ. ಫೇಸ್ ಬುಕ್ ನ ಭಾಗವಾಗಿದ್ದಕ್ಕಾಗಿ ತನ್ನ ಎಲ್ಲಾ ಸಬ್ಸ್ ಕ್ರೈಬರ್ ಗಳಿಗೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್‌ ಬರ್ಗ್ ಧನ್ಯವಾದ ಹೇಳಿದ್ದಾರೆ.

Advertisement

ಓದಿ : ಶಿರಾಡಿ ಘಾಟ್ ಎರಡನೇ ತಿರುವಿನಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್: ಸಂಚಾರ ಸ್ಥಗಿತ

17 ವರ್ಷಗಳ ಅದ್ಭುತ ವರ್ಷಗಳಲ್ಲಿ ಸಾಧಿಸಿರುವ ಅನೇಕ ಹಂತಗಳ ಬಗ್ಗೆ ಸಂಸ್ಥೆ ಹೆಮ್ಮೆ ಪಡುತ್ತದೆ. ಮುಂದಿನ ವರ್ಷಗಳ  ಬಗ್ಗೆಯೂ ನಾನು ಇನ್ನಷ್ಟು ಆಶಾವಾದಿಯಾಗಿದ್ದೇನೆ ಎಂದು ಅವರು  ಬರೆದುಕೊಂಡಿದ್ದಾರೆ.

ಫೇಸ್‌ ಬುಕ್. ಫೇಸ್‌ ಬುಕ್ ಪೇ ಮತ್ತು ಫೇಸ್‌ ಬುಕ್ ಶಾಪ್ಸ್ ಪ್ರಾರಂಭಿಸಿತು, ಇವು ಕಂಪನಿಯ ಅಪ್ಲಿಕೇಶನ್‌ ಗಳನ್ನು ಗ್ರಾಹಕರಿಗೆ ಜಾಹೀರಾತುಗಳನ್ನು ಕ್ಲಿಕ್ ಮಾಡಲು ಮತ್ತು ಖರೀದಿ ಮಾಡಲು ಅನುವು ಮಾಡಿಕೊಡುತ್ತದೆ, ಇದರಲ್ಲಿ ಇನ್‌ ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸಹ ಒಳಗೊಂಡಿವೆ.

Advertisement

ಫೇಸ್ ಬುಕ್ ನ ಜಾಹೀರಾತು ಆದಾಯವನ್ನು ಸಂಪೂರ್ಣವಾಗಿ ಒಳಗೊಂಡಿರುವ ಒಟ್ಟು ಆದಾಯವು ಡಿಸೆಂಬರ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 33% ಏರಿಕೆ ಕಂಡು 28.07 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಓದಿ :ವಿಧಾನ ಪರಿಷತ್ ಕಲಾಪ ಮೂರು ದಿನ ವಿಸ್ತರಣೆ: ಫೆ.10 ರವರೆಗೆ ನಡೆಯಲಿದೆ ಕಲಾಪ

Advertisement

Udayavani is now on Telegram. Click here to join our channel and stay updated with the latest news.

Next