ಮುಂಬೈ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳದ ನಡುವೆಯೇ, ಮಹಾರಾಷ್ಟ್ರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಬಳಿಕ ಮತ್ತೆ ಕೊರೊನಾ ವಾರ್ಡ್‌ಗಳನ್ನು ತೆರೆಯಲಾಗಿದೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಪ್ರತ್ಯೇಕ ವಾರ್ಡ್‌ಗಳ ರಚನೆ ಜತೆಗೆ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಹೆಚ್ಚಿಸಲಾಗಿದೆ.
ಭಾನುವಾರ ಒಂದೇ ದಿನದಲ್ಲೇ ರಾಜ್ಯದಲ್ಲಿ 397ಮಂದಿಗೆ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿನ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ ಕಳೆದ ವರ್ಷ ಅಕ್ಟೋಬರ್ ಬಳಿಕ ಈಗ ಮೊದಲ ಬಾರಿಗೆ 2ಸಾವಿರಕ್ಕೆ ತಲುಪಿದೆ.
ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ ಹೆಚ್ಚಳ, ಮಾಸ್ಕ್ ಧಾರಣೆಯನ್ನು ಹೆಚ್ಚಿಸಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕೂಡ ಈ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿ ನೀಡಿತ್ತು.