Advertisement

ಕಾಡ್ಗಿಚ್ಚಿನಿಂದ ರಕ್ಷಣೆ : ಭೂಮಿ ಮೇಲಿನ ಅತಿ ದೊಡ್ಡ ಮರಕ್ಕೆ ಹೊದಿಕೆ

01:12 PM Sep 18, 2021 | Team Udayavani |

ಕ್ಯಾಲಿಫೋರ್ನಿಯಾ: ಭೂಮಿ ಮೇಲಿನ ಅತಿದೊಡ್ಡ ಮರಕ್ಕೆ ಅಮೆರಿಕದ ಫೈರ್‌ ಫೈಟರ್‌ ಗಳು ಮುಚ್ಚಿಗೆ ಹಾಕಿ ರಕ್ಷಿಸಿದ್ದಾರೆ!
ಹೌದು, ಕ್ಯಾಲಿಫೋರ್ನಿಯಾ ಪ್ರಾಂತ್ಯದ ಸುಖೋಯಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಇಲ್ಲಿನ
ಜನರಲ್‌ ಶೆರ್ಮಾನ್‌ ಎಂಬ ವೃಕ್ಷಕ್ಕೆ ಆಪತ್ತು ಎದುರಾಗಿತ್ತು.

Advertisement

2,700 ವರ್ಷಗಳಷ್ಟು ಪುರಾತನವಾದ ಮರ, ಬೃಹತ್‌ ಏಕಕಾಂಡದ ವಿಶೇಷತೆ ಹೊಂದಿದೆ. ಬೆಂಕಿ ಮುಂತಾದ ಅವಘಡಗಳಿಂದ ಈ ಮರವನ್ನು ರಕ್ಷಿಸಲೆಂದೇ ಗಾತ್ರಕ್ಕನುಗುಣವಾಗಿ ಅಗ್ನಿರೋಧಕ ಮುಚ್ಚಿಕೆಯನ್ನು ಇಲ್ಲಿನ ಅರಣ್ಯ ಇಲಾಖೆ ಸಿದ್ಧಪಡಿಸಿತ್ತು.

ಜನರಲ್‌ ಶೆರ್ಮಾನ್‌ ವೃಕ್ಷ 275 ಅಡಿ ಎತ್ತರ- 36 ಅಡಿ ಅಗಲವಿದ್ದು, ಬುಡದಿಂದ ತುಸು ಮೇಲ್ಭಾಗದವರೆಗೆ ಮಾತ್ರವೇ
ಮುಚ್ಚಿಕೆಯಿಂದ ರಕ್ಷಿಸಲಾಗಿದೆ. ಆದರೆ, ಇದೇ ಕಾಡಿನಲ್ಲಿ ಪ್ರಾಚೀನ ಕಾಲದಿಂದ ಹಲವು ವೃಕ್ಷಗಳು ಸುಟ್ಟು ಕರಕಲಾಗಿರುವ
ಬಗ್ಗೆ ಪರಿಸರಪ್ರಿಯರ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಬಿಜೆಪಿ, ಶಿವಸೇನಾ ಮತ್ತೆ ಮೈತ್ರಿ ಸಾಧ್ಯತೆ?ಊಹಾಪೋಹಕ್ಕೆ ಕಾರಣವಾದ ಉದ್ಧವ್ ಠಾಕ್ರೆ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next