ಮನುಷ್ಯನ ಜೀವವು ಆತ್ಮ, ಮನಸ್ಸು ಮತ್ತು ದೇಹವನ್ನು ಹೊಂದಿದೆ. ಮನಸ್ಸು ಸದಾ ಜಾಗೃತ ವಾಗಿರುತ್ತದೆ. ಜತೆಗೆ ದೇಹವೂ ಜಾಗೃತಾ ವಸ್ಥೆಯಲ್ಲಿ ಇರುತ್ತದೆ.
Advertisement
ಅತ್ಮ, ಮನಸ್ಸು ಮತ್ತು ದೇಹ ಪ್ರತ್ಯೇಕವಿದ್ದರೂ ದೇಹದೊಳಗೆ ಇವೆಲ್ಲವೂ ಬೆಸೆದುಕೊಂಡೇ ಇವೆ. ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ನಡುವೆ ಸೌಹಾರ್ದ ಮತ್ತು ಸಮತೋಲನವನ್ನು ಕಾಣಬಹುದು. ಪ್ರತಿಯೊಂದು ಮುಖ್ಯ ಅಂಗವೂ ಮನುಷ್ಯನ ದೇಹದ ನಾನಾ ಭಾವನೆ ಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಪಿತ್ತ ಜನಕಾಂಗಕ್ಕೂ ಕೋಪಕ್ಕೂ ನಂಟಿದೆ. ಅದೇ ರೀತಿ ದುಗುಡ, ಆತಂಕ, ಖನ್ನತೆಗಳಿಗೂ ಹೃದಯಕ್ಕೂ ನಂಟಿದೆ. ಗುಲ್ಮಕ್ಕೂ ಮನುಷ್ಯನ ತೊಳಲಾಟಕ್ಕೂ ನಂಟಿದೆ.
Related Articles
Advertisement
“ಈಶಾವಾಸ್ಯ ಉಪನಿಷದ್’ ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ(ಜೀವಿಗಳಲ್ಲಿಯೂ) ಆತ್ಮನೇ ಕಂಡುಬರುತ್ತಾನೋ, ಅಂತಹ ಏಕತ್ವ ವನ್ನು ನಿರಂತರವೂ ಕಾಣುವ ಜ್ಞಾನಿಯಾದವನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? ಎಂದಿದೆ.
ಮೊದಲಿಗೆ ನಾವು, ಎಲ್ಲರಲ್ಲೂ ಪರಮಾತ್ಮನ ಅಂಶರೂಪಿಯಾದ ಪರಬ್ರಹ್ಮ ಸ್ವರೂಪಿಯನ್ನು ಕಾಣುತ್ತ, ಆಧ್ಯಾತ್ಮಿಕತೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಪರಬ್ರಹ್ಮ ತಣ್ತೀದಲ್ಲಿಯೇ ನಾವೆಲ್ಲರೂ ಇದ್ದೇವೆ ಎಂಬುದರ ಅರಿವಿನ ಜ್ಞಾನ ವನ್ನು ಹೊಂದಬೇಕಾಗುತ್ತದೆ. ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗೂ ಸಾವಿನ ಮೂಲಕ ಅವ್ಯಕ್ತವಾಗುತ್ತದೆ.
ಮನಸ್ಸು ಮತ್ತು ದೇಹದ ಸಂಬಂಧವ್ಯಕ್ತಿಗಳ ದೈಹಿಕ ಮತ್ತು ಮಾನಸಿಕ ರಚನೆಗಳಲ್ಲಿ ಭಿನ್ನತೆಯಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ನಂತಿರುವುದಿಲ್ಲ. ಅಂದರೆ ದೈಹಿಕ ರಚನೆ ಅಥವಾ ಹೊರ ರೂಪದಲ್ಲಿ ಮಾತ್ರವಲ್ಲ; ಮಾನಸಿಕ ಸಂರಚನೆಯಲ್ಲೂ ಭಿನ್ನತೆಯನ್ನು ಕಾಣಬ ಹುದಾಗಿದೆ. ಮನೋವಿಜ್ಞಾನವು ಮನಸ್ಸು ಮತ್ತು ದೇಹ ಇವೆರಡೂ ಬೇರೆ ಬೇರೆಯೇ ಅಥವಾ ಒಂದೇ? ಅಥವಾ ಇವೆರಡು ಎಷ್ಟರಮಟ್ಟಿಗೆ ಪ್ರತ್ಯೇಕವಾಗಿರುತ್ತದೆ ಅಥವಾ ಒಂದೇ ಆಗಿರುತ್ತದೆ? ಎಂಬ ಬಗ್ಗೆ ತುಂಬಾ ಚಿಂತಿಸಿದೆ. ಅನೇಕ ಮನೋವಿಜ್ಞಾನಿಗಳು ಇವೆರಡೂ ಒಂದೇ, ಇವೆರಡೂ ಪ್ರತ್ಯೇಕ ಎಂದೆಲ್ಲ ಅನೇಕ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ಮನಸ್ಸು, ಮಾನಸಿಕ ಪ್ರಕ್ರಿಯೆಗಳು, ಯೋ ಚನೆ ಮತ್ತು ಪ್ರಜ್ಞೆಯನ್ನೂ, ದೇಹವು ಭೌತಿಕ ಅಂಶಗಳನ್ನೂ ಒಳಗೊಳ್ಳುತ್ತದೆ. ಮನಸ್ಸು ದೇಹದ ಭಾಗವೇ ಅಥವಾ ದೇಹ ಮನಸ್ಸಿನ ಭಾಗವೇ? ಅವೆರಡೂ ಭಿನ್ನವಾಗಿದ್ದರೆ ಅವು ಪರಸ್ಪರ ಹೇಗೆ ಸಂವಹನವನ್ನು ನಡೆಸುತ್ತವೆ? ಮತ್ತು ಎರಡರಲ್ಲಿ ಯಾವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ? ಎಂಬ ಅನೇಕ ಚಿಂತನೆಗಳು ಕಾಣಸಿಗುತ್ತವೆ. ಪ್ರಸ್ತುತ ಇವೆರಡೂ ಬೀಜ-ವೃಕ್ಷ ನ್ಯಾಯದಂತೆ. ಮನಸ್ಸು ಮತ್ತು ದೇಹ/ಮೆದುಳನ್ನು ವಿವರಿಸುವ ಸಿದ್ಧಾಂತಗಳು
ಮಾನವನು ಭೌತಿಕವಲ್ಲದ ಮನಸ್ಸು ಮತ್ತು ಭೌತಿಕವಾದ ದೇಹವನ್ನು ಹೊಂದಿದ್ದಾನೆ. ಇದುವೇ ದ್ವಂದ್ವತೆ. ದ್ವಂದ್ವವಾದವು ಮನಸ್ಸು ಮತ್ತು ದೇಹ ಎರಡೂ ಪ್ರತ್ಯೇಕ ಘಟಕಗಳಾಗಿ ಅಸ್ತಿತ್ವದಲ್ಲಿದೆ ಎಂಬ ದೃಷ್ಟಿಕೋನವಾಗಿದೆ. ಮನದೊಳಗಿನ ದ್ವಂದ್ವಕ್ಕೆ ಉತ್ತರ ಕಂಡು ಕೊಳ್ಳುವ ಪ್ರಯತ್ನದಂತಿರುವ ಮೂರ್ತ ಹಾಗೂ ಅಮೂರ್ತಗಳ, ಆಕಾರ ಹಾಗೂ ನಿರಾಕಾರಗಳ ನಡುವಿನ ದ್ವಂದ್ವವನ್ನು ನಾವು “ನೀ ಮಾಯೆ ಯೊಳಗೊ ನಿನ್ನೊಳು ಮಾಯೆಯೊ’ ಕೀರ್ತ ನೆಯಲ್ಲಿ ಗುರುತಿಸಬಹುದಾಗಿದೆ. ಕೀರ್ತನೆಯ ಉದ್ದಕ್ಕೂ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧ ರಿಸುವುದರಲ್ಲಿ ಯಾವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ…. ದೇಹವೇ ಅಥವಾ ಮನಸ್ಸೇ? ಎಂಬ ದ್ವಂದ್ವತೆಯ ಬಗೆಗಿನ ವಿಚಾರಗಳನ್ನು ಗುರುತಿಸಬಹುದಾಗಿದೆ. ಇದು ಮನೋವಿಜ್ಞಾನ ಇಂದಿಗೂ ಚರ್ಚಿಸುತ್ತಿರುವ ದೇಹ ಮತ್ತು ಮನಸ್ಸಿನ ದ್ವಂದ್ವತೆಗೆ ಸಂಬಂಧಿಸಿದೆ. ಡಾ| ಮೈತ್ರಿ ಭಟ್, ವಿಟ್ಲ