Advertisement

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

08:48 AM Sep 08, 2024 | Team Udayavani |

ನ್ಯೂಯಾರ್ಕ್:‌ ಎರಡನೇ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ (Aryna Sabalenka) ಅವರು ಯುಎಸ್‌ ಓಪನ್‌ (US Open) ಚಾಂಪಿಯನ್‌ ಆಗಿದ್ದಾರೆ. ಶನಿವಾರ ನಡೆದ ಫೈನಲ್‌ ನಲ್ಲಿ ಆತಿಥೇಯ ಜೆಸ್ಸಿಕಾ ಪೆಗುಲಾ ವಿರುದ್ದ ಗೆದ್ದು ಮೂರನೇ ಗ್ರಾನ್‌ ಸ್ಲಾಮ್‌ ಗೆದ್ದುಕೊಂಡಿದ್ದಾರೆ.

Advertisement

ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸಬಲೆಂಕಾ 7-5, 7-5 ಅಂತರದಲ್ಲಿ ಜಯಗಳಿಸಿ ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದರು.

0-3 ರಿಂದ ಚೇತರಿಸಿಕೊಂಡ ಪೆಗುಲಾ ಹೋರಾಟಕ್ಕೆ ಇಳಿದರು, ಆದಾಗ್ಯೂ, ಸಬಲೆಂಕಾ ಮುನ್ನಡೆ ಸಾಧಿಸಿದರು.

ಕಳೆದ ವರ್ಷ ರನ್ನರ್ ಅಪ್ ಮತ್ತು 2022 ರಲ್ಲಿ ಸೆಮಿಫೈನಲಿಸ್ಟ್ ಆಗಿರುವ ಸಬಲೆಂಕಾ ಅವರು “ಹಿಂದಿನ ಎಲ್ಲಾ ಕಠಿಣ ಸೋಲುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಿಮ್ಮ ಕನಸನ್ನು ಎಂದಿಗೂ ಬಿಟ್ಟುಕೊಡಬೇಡಿ ಮತ್ತು ಪ್ರಯತ್ನಿಸುತ್ತಲೇ ಇರಿ, ಕಷ್ಟಪಟ್ಟು ಕೆಲಸ ಮಾಡುತ್ತಿರಿ” ಎಂದು ಹೇಳಿದರು.

ಸಬಲೆಂಕಾ ಕಳೆದ ವರ್ಷ ಇಲ್ಲಿ ಫೈನಲ್‌ ನಲ್ಲಿ ಕೊಕೊ ಗಾಫ್ ಅವರಿಗೆ ಶರಣಾಗಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಈ ಬಾರಿ 13ನೇ ಶ್ರೇಯಾಂಕದ ಎಮ್ಮಾ ನವಾರೊ ಅವರನ್ನು 6-3, 7-6 (2) ಸೆಟ್‌ಗಳಿಂದ ಸೆಮಿ ಫೈನಲ್‌ ನಲ್ಲಿ ಸೋಲಿಸಿ ಮತ್ತೆ ಫೈನಲಿಗೇರಿದ ಸಾಧನೆ ಮಾಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next