Advertisement

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

03:51 PM Oct 20, 2021 | Team Udayavani |

ಮುಂಬಯಿ : ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್  ಖಾನ್ ಅವರ ಪುತ್ರ ಆರ್ಯನ್ ಖಾನ್ ಗೆ ಎನ್ ಡಿಪಿಯಸ್ ನ್ಯಾಯಾಲಯ ಬುಧವಾರ ಜಾಮೀನು ನೀಡಲು ನಿರಾಕರಿಸಿದೆ.

Advertisement

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರ್ಯನ್‌ ಖಾನ್‌ ಮತ್ತು ಗೆಳೆಯರನ್ನು ಅಕ್ಟೋಬರ್ 3 ರಂದು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಆರ್ಯನ್ ಖಾನ್ ಜೈಲುವಾಸ ಮುಂದುವರೆದಿದೆ.

ಪ್ರಕರಣದಲ್ಲಿ ಆರ್ಯನ್ ಮಾತ್ರವಲ್ಲದೆ ಇನ್ನಿಬ್ಬರಿಗೂ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಅಕ್ಟೋಬರ್ 8 ರಿಂದ ಆರ್ಯನ್ ನನ್ನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ.

ಹೈಕೋರ್ಟ್ ಮೊರೆ

Advertisement

ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿದ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಗೆ 2 ದಿನಗಳಲ್ಲಿ ಅರ್ಜಿ ಸಲ್ಲಿಸುವುದಾಗಿ ಆರ್ಯನ್ ಖಾನ್ ಪರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಟಿಯೊಂದಿಗೆ ಚಾಟ್! 

ಆರ್ಯನ್ ಸಿಕ್ಕಿಬಿದ್ದ ದಿನದಂದು ನಟಿಯೊಬ್ಬಳೊಂದಿಗೆ ಮಾಡಿರುವ ಚಾಟ್ ಲಿಸ್ಟ್ ಎನ್ ಸಿ ಬಿ ಕೋರ್ಟ್ ಗೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next