Advertisement

ಸತತ 4 ವರ್ಷಗಳಿಂದ ಡ್ರಗ್‌ ಸೇವನೆ; ಕೋರ್ಟ್‌ನಲ್ಲಿ ಎನ್‌ಸಿಬಿ ಉಲ್ಲೇಖ

11:38 AM Oct 05, 2021 | Team Udayavani |

ಹೊಸದಿಲ್ಲಿ: ಡ್ರಗ್ಸ್‌ ಜಾಲದಲ್ಲಿ ಬಂಧಿತನಾಗಿರುವ ಆರ್ಯನ್‌ ಖಾನ್‌ ಸತತ 4 ವರ್ಷ ಗಳಿಂದ ಡ್ರಗ್‌ ಸೇವಿಸುತ್ತಿದ್ದ ಎಂಬ ವಿಚಾರವನ್ನು ಎನ್‌ ಸಿಬಿ ಬಹಿರಂಗಪಡಿಸಿದೆ. ರವಿವಾರ ವಿಚಾರಣೆ ವೇಳೆ ಸ್ವತಃ ಆರ್ಯನ್‌ ಈ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. ತಾನು ದೀರ್ಘಾವಧಿಯಿಂದ ಡ್ರಗ್‌ ಸೇವಿಸುತ್ತಿದ್ದೆ.

Advertisement

ಇದನ್ನೂ ಓದಿ:ಪೆಂಡೋರಾ ತನಿಖಾ ವರದಿ:ಅನಿಲ್‌ ಹೆಸರಲ್ಲಿ 9,600 ಕೋ.ರೂ. ಆಸ್ತಿ, ತೆಂಡೂಲ್ಕರ್‌ ಗೌಪ್ಯ ಕಂಪೆನಿ

ಯುಕೆ, ದುಬಾೖ ಸೇರಿ ಬೇರೆ ದೇಶಗಳಲ್ಲಿ ವಾಸವಾಗಿದ್ದಾಗಲೂ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದೆ ಎಂದು ಆರ್ಯನ್‌ ಹೇಳಿದ್ದಾನೆ. ವಿಚಾರಣೆ ವೇಳೆ ಆತ ಒಂದೇ ಸಮನೆ ಅಳುತ್ತಿದ್ದ. ಬಳಿಕ ತಂದೆ ಶಾರುಖ್‌ ಖಾನ್‌ ರೊಂದಿಗೆ 2 ನಿಮಿಷ  ಮಾತನಾಡಲು ಅವಕಾಶ ಕಲ್ಪಿಸ ಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಟ್‌ ಕಾಯಿನ್‌, ಡಾರ್ಕ್‌ ನೆಟ್‌ ನಂಟು?:
ಆರ್ಯನ್‌ ಪ್ರಕರಣದೊಂದಿಗೆ ನಂಟು ಹೊಂದಿರುವ ಡ್ರಗ್‌ ಪೆಡ್ಲರ್‌ ವೊಬ್ಬನನ್ನು ಎನ್‌ ಸಿಬಿ ಸೋಮವಾರ ಸಂಜೆ ವಶಕ್ಕೆ ಪಡೆದಿದೆ. ಆತನಿಂದ ಎಂಡಿ, ಎಂಡಿ ಎಂಎ ಮಾತ್ರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈತ ಡಾರ್ಕ್‌ ನೆಟ್‌ ಮೂಲಕ ಇತರರಿಗೆ ಡ್ರಗ್‌ ಪೂರೈಕೆ ಮಾಡುತ್ತಿದ್ದ ಹಾಗೂ ಬಿಟ್‌ ಕಾಯಿನ್‌ ಮೂಲಕ ಹಣ ಪಡೆಯುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.

ಮ್ಯಾರಥಾನ್‌ ವಿಚಾರಣೆ: ಸೋಮವಾರ ಆರ್ಯನ್‌ ನನ್ನು ತನ್ನ ವಶದಲ್ಲಿ ಮುಂದುವರಿಸಲು ಮುಂಬಯಿ ಕೋರ್ಟ್‌ನಲ್ಲಿ ಎನ್‌ಸಿಬಿ ಹಲವಾರು ರೀತಿಯ ವಾದಗಳನ್ನು ಮಂಡಿಸಿ ಯಶಸ್ವಿಯಾಗಿದೆ. ಎನ್‌ಸಿಬಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌, “ಆರ್ಯನ್‌ ಫೋನ್‌ ನಲ್ಲಿ, ವಾಟ್ಸ್‌ ಆ್ಯಪ್‌ ಚಾಟ್‌ ನಲ್ಲಿ ಹಲವು ಆಘಾತಕಾರಿ ಅಂಶಗಳು ಕಂಡು ಬಂದಿವೆ. ಡ್ರಗ್ಸ್‌ಗಾಗಿ ಹಣ ನೀಡಿರುವ ಬಗ್ಗೆ ಉಲ್ಲೇಖವಾಗಿದೆ’ ಎಂದರು.

Advertisement

ಶಾರುಖ್‌ಗೆ ಬೆಂಬಲ
ಶಾರುಖ್‌ರ ಈ ಕಷ್ಟಕಾಲದಲ್ಲಿ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ #WeStand WithSRK ಎಂಬ ಅಭಿಯಾನದ ಮೂಲಕ ನೈತಿಕ ಬೆಂಬಲ ನೀಡಲಾರಂಭಿಸಿದ್ದಾರೆ. ಒಬ್ಬ ಅಭಿಮಾನಿ, “ನಿಮ್ಮ ಘನತೆ ಮಣ್ಣುಪಾಲು ಮಾಡಲು ಯಾರೆಷ್ಟೇ ಪ್ರಯತ್ನಿಸಿದರೂ ಆ ಎಲ್ಲ ಪ್ರಯತ್ನಗಳು ನೀವು ಏರಿದ ಎತ್ತರಕ್ಕಿಂತ ಕಡಿಮೆಯೇ ಆಗಿರುತ್ತವೆ’ ಎಂದಿದ್ದಾರೆ. ಇಂಥ ಅನೇಕ ಟ್ವೀಟ್‌ಗಳು ಈ ಅಭಿಯಾ ನದಡಿ ಮೂಡಿಬಂದಿವೆ. ಪೂಜಾ ಭಟ್‌, ಸುಚಿತ್ರಾ ಕೃಷ್ಣ ಮೂರ್ತಿ, ಹನ್ಸಲ್‌ ಮೆಹ್ತಾ ಸೇರಿ  ಬಾಲಿವುಡ್‌ ಗಣ್ಯರೂ ಶಾರುಖ್‌ಗೆ ಬೆಂಬಲ ಸೂಚಿಸಿದ್ದಾರೆ. ನಟ ಸಲ್ಮಾನ್‌ ಖಾನ್‌ ಅವರು ರವಿವಾರ ರಾತ್ರಿಯೇ ಶಾರುಖ್‌ ಮನೆಗೆ ಭೇಟಿ ಮಾತುಕತೆ ನಡೆಸಿದ್ದರು.

ನಾನು ಯಾವುದೇ ಡ್ರಗ್‌ನ ಫ್ಯಾನ್‌ ಅಲ್ಲ. ಆದರೆ ಆರ್ಯನ್‌ ಖಾನ್‌ ಬಂಧನ ಹಿನ್ನೆಲೆ ಅವನ ಅಪ್ಪ ಶಾರುಖ್‌ ಖಾನ್‌ ರನ್ನು ಹೀಗಳೆಯುತ್ತಿರುವ ವಿಘ್ನ ಸಂತೋಷಿಗಳನ್ನು ನೋಡಿ ಅಚ್ಚರಿಯಾಗುತ್ತಿದೆ. ಜನರೇ, ಸ್ವಲ್ಪವಾದರೂ ಸಹಾನುಭೂತಿ ಇರಲಿ.
● ಶಶಿ ತರೂರ್‌, ಕಾಂಗ್ರೆಸ್‌ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next