Advertisement

ಆರ್ಯನ್ ಖಾನ್‍ಗೆ ಅಂತರಾಷ್ಟ್ರೀಯ ಡ್ರಗ್ಸ್ ನೆಟ್‍ವರ್ಕ್ : ಎನ್‍ಸಿಬಿ

04:25 PM Oct 14, 2021 | Team Udayavani |

ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಅಂತಾರಾಷ್ಟ್ರೀಯ ಡ್ರಗ್ಸ್ ನೆಟ್‍ವರ್ಕ್ ನಂಟು ಹೊಂದಿದ್ದಾರೆ ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬುಧವಾರ ಮುಂಬೈ ನ್ಯಾಯಾಲಕ್ಕೆ ತಿಳಿಸಿದೆ.

Advertisement

ಆರ್ಯನ್ ಮತ್ತು ಸಹ ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯ ಸಮಯದಲ್ಲಿ, ಎನ್‍ಡಿಪಿಸ್ ಕಾಯ್ದೆಗೆ ಸಂಬಂಧಿಸಿದ ವಿಷಯಗಳನ್ನು ವಿಚಾರಣೆಗೆ ಗೊತ್ತುಪಡಿಸಿ, ವಿಶೇಷ ನ್ಯಾಯಾಧೀಶ ವಿ.ವಿ. ಪಾಟೀಲ್ ಅವರ ಮುಂದೆ ವಿವರಗಳನ್ನು ಸಲ್ಲಿಸಲಾಯಿತು.  ಆರ್ಯನ್ ವಿದೇಶದಲ್ಲಿ ಕೆಲವು ವ್ಯಕ್ತಿಗಳೊಂದಿಗೆ ಅಕ್ರಮ ಸಂಪರ್ಕಕ್ಕಾಗಿ ಅಂತಾರಾಷ್ಟ್ರೀಯ ಡ್ರಗ್ ನೆಟ್‍ವರ್ಕ್‍ನ ಭಾಗವಾಗಿರುವಂತೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎನ್‍ಸಿಬಿ ಹೇಳಿದೆ.

ಸರಿಯಾದ ವಾಹಿನಿ ಮೂಲಕ ಸಂಬಂಧಿತ ವಿದೇಶಿ ಏಜೆನ್ಸಿಯನ್ನು ಸಂಪರ್ಕಿಸಲು, ಈ ಸಂಬಂಧಗಳನ್ನು ಸರಿಯಾಗಿ ತನಿಖೆ ಮಾಡಲು ತನಿಖೆಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಎನ್‍ಸಿಬಿ ಸಂಸ್ಥೆ ಹೇಳಿದೆ. ಆರ್ಯನ್ ಖಾನ್ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು, ವಾಟ್ಸಾಪ್ ಚಾಟ್‌ಗಳು ಮತ್ತು ಫೋಟೋಗಳ ರೂಪದಲ್ಲಿ ಸಾಕ್ಷ್ಯಗಳು ದೊರೆತಿವೆ. ಇವುಗಳಿಂದ ಇತರರೊಂದಿಗೆ ಕಾನೂನು ಬಾಹಿರ ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿರುವುದು ತಿಳಿದು ಬಂದಿದೆ ಎಂದು ಎನ್‍ಸಿಬಿ ಹೇಳಿದೆ.

ಎನ್‌ಸಿಬಿಯ ಆರೋಪವನ್ನು ಅಂತರ್ಗತವಾಗಿ ಅಸಂಬದ್ಧಎಂದು ಕರೆದ ಹಿರಿಯ ವಕೀಲ ಅಮಿತ್ ದೇಸಾಯಿ, ಆರ್ಯನ್ ಅವರಲ್ಲಿ ಯಾವುದೇ ಡ್ರಗ್ಸ್ ಕಂಡುಬಂದಿಲ್ಲ, ಹಲವು ದೇಶಗಳಲ್ಲಿ ಈ ಡ್ರಗ್ಸ್ ಕಾನೂನು ಬದ್ಧವಾಗಿವೆ. ಖಾನ್ ಪುತ್ರ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ ಎಂದು ಹೇಳಿದರು. ನ್ಯಾಯಾಲಯವು ಗುರುವಾರ ವಿಚಾರಣೆಯನ್ನು ಮುಂದುವರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next