Advertisement

ಕ್ಷೀರಪಥದಲ್ಲಿ 28 ಹೊಸ ನಕ್ಷತ್ರ ಪತ್ತೆ

12:27 AM Jul 27, 2019 | mahesh |

ನೈನಿತಾಲ್‌: ಉತ್ತರಾಖಂಡದಲ್ಲಿರುವ ಆರ್ಯಭಟ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಕ್ಷೀರಪಥ ನಕ್ಷತ್ರ ಪುಂಜದಲ್ಲಿ 28 ಹೊಸ ನಕ್ಷತ್ರಗಳನ್ನು ಕಂಡುಕೊಂಡಿದ್ದಾರೆ. ಈ ನಕ್ಷತ್ರಗಳ ಪ್ರಕಾಶವು ಬದಲಾಗುತ್ತಲೇ ಇರುತ್ತದೆ. ಈ ರೀತಿಯ ನಕ್ಷತ್ರಗಳನ್ನು ಇದೇ ಮೊದಲ ಬಾರಿಗೆ ಈ ವಲಯದಲ್ಲಿ ಕಂಡುಕೊಳ್ಳಲಾಗಿದ್ದು, ಇದು ಅತ್ಯಂತ ಮಹತ್ವದ ಸಾಧನೆ ಎಂದು ಸಂಶೋಧನಾ ಸಂಸ್ಥೆ ನಿರ್ದೇಶಕ ವಹಾ ಬುದ್ದೀನ್‌ ಹೇಳಿದ್ದಾರೆ. ನಕ್ಷತ್ರ ಕಾಲಕಾಲಕ್ಕೆ ಸಂಕುಚಿತಗೊಳ್ಳುವುದು ಹಾಗೂ ವಿಕಸಿತ ವಾಗುವುದೇ ಪ್ರಕಾಶ ಬದಲಾಗುವುದಕ್ಕೆ ಕಾರಣವಿರಬಹುದು. ಇತರ ಗ್ರಹಗಳು ಈ ನಕ್ಷತ್ರಗಳ ಎದುರು ಕಾಣಿಸಿಕೊಂಡಾಗ ಪ್ರಕಾಶ ಕಾಣಿಸದೇ ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಡಾ| ಸ್ನೇಹಲತಾ ಮತ್ತು ಡಾ| ಎ.ಕೆ. ಪಾಂಡೆ ನೇತೃತ್ವದ ತಂಡ ಈ ಮಹತ್ವದ ಸಂಶೋಧನೆ ನಡೆಸಿದ್ದು, ಇದರ ಸಮಗ್ರ ವಿವರ ಆಗಸ್ಟ್‌ ಮಾಸದ ಆಸ್ಟ್ರೋನಾಮಿಕಲ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next