ನವ ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪೆಟ್ರೋಲ್ ಹಾಗೂ ಡಿಸೇಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಾಗರಿಕರನ್ನು ಸಂವೇದನಾಶೀಲಗೊಳಿಸಲು ಎಲೆಕ್ಟ್ರಿಕ್ ವೆಹಿಕಲ್ ಮಾಸ್ ಜಾಗೃತಿ ಅಭಿಯಾನ ‘ಸ್ವಿಚ್ ದೆಹಲಿ’ ಅನ್ನು ಪ್ರಾರಂಭಿಸಿದ್ದಾರೆ.
ಓದಿ :ಫಸ್ಟ್ ಹಾಫ್ ಒಂದ್ ಲೆಕ್ಕ:ಸೆಕೆಂಡ್‌ಹಾಫ್ ಇನ್ನೊಂದ್ ಲೆಕ್ಕ! ವರ್ಷಪೂರ್ತಿ ಫುಲ್ ಮೀಲ್ಸ್
2024 ರ ವೇಳೆಗೆ ಶೇಕಡಾ 25 ರಷ್ಟು ದೆಹಲಿಯಲ್ಲಿ ಹೆಚ್ಚಿನವರಲ್ಲಿ ಎಲೆಕ್ಟ್ರಿಕ್ ವಾಹನಗಳು ಇರಬೇಕು. ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳಿದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ದೆಹಲಿಯನ್ನು ಸ್ವಚ್ಚಗೊಳಿಸುವುದರ ಮೂಲಕ ಬದಲಾಯಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ವಾಹನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ನಾವು ‘ಸ್ವಿಚ್ ದೆಹಲಿ’ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಕೇಜ್ರಿವಾಲ್ ಗುರುವಾರ(ಫೆ.4) ತಮ್ಮ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಿದ್ದಾರೆ.
ದೆಹಲಿ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಖರೀದಿಸಲು ಪ್ರೋತ್ಸಾಹ ಧನ ನೀಡಿದೆ.
ಓದಿ : ವಿದೇಶಿ ಕಲಾವಿದರು, ಹೋರಾಟಗಾರರು ಪ್ರತಿಭಟನೆಗೆ ಬೆಂಬಲ ಸೂಚಿಸದರೇ ತಪ್ಪೇನಿದೆ? : ಟಿಕಾಯತ್