Advertisement

ರಾಣಿಬೆನ್ನೂರಲ್ಲಿ ಅರುಣೋದಯ

10:23 PM Dec 09, 2019 | Lakshmi GovindaRaj |

ಹಾವೇರಿ: ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಅರುಣೋದಯದೊಂದಿಗೆ ಕಮಲ ಅರಳಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಷ್ಟೇ ಕೃಷ್ಣಪ್ಪ ಭೀಮಪ್ಪ ಕೋಳಿವಾಡರನ್ನು ಸೋಲಿಸಿದ್ದ ಮತದಾರರು, ಈ ಉಪಚುನಾವಣೆ ಯಲ್ಲಿಯೂ ಅವರನ್ನು ತಿರಸ್ಕರಿಸಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ 95438 ಮತ ಪಡೆದು ಎದುರಾಳಿ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡರನ್ನು 23,222 ಮತಗಳ ಅಂತ ರದಿಂದ ಸೋಲಿಸಿದ್ದಾರೆ. ಕೋಳಿವಾಡ 72,216 ಮತ ಭಾರೀ ಪೈಪೋಟಿ ನೀಡಿದರು. ಜೆಡಿ ಎಸ್‌ ಅಭ್ಯರ್ಥಿ ನೋಟಾಕ್ಕಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಹಲ ಗೇರಿ, 979 ಮತಗಳನ್ನು ಪಡೆದಿದ್ದರೆ, ನೋಟಾಕ್ಕೆ 1,608 ಮತಗಳು ಬಿದ್ದಿರುವುದು ವಿಶೇಷವಾಗಿದೆ.

ಕಾಂಗ್ರೆಸ್‌ನ ಕೊಳಿವಾಡ, “ಇದು ತಮ್ಮ ಕೊನೆಯ ಚುನಾವಣೆಯಾಗಿದೆ’ ಎಂದು ಪ್ರಚಾರ ಮಾಡಿದ್ದರು. ಈ ಹೇಳಿಕೆ ಕ್ಷೇತ್ರದಲ್ಲಿ ಅನುಕಂಪ ಸೃಷ್ಟಿಸಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಅ ಧಿಕಾರದಲ್ಲಿದ್ದು ನಿವೃತ್ತಿಯಾಗಬೇಕೆಂದುಕೊಂ ಡಿದ್ದ, ಕೋಳಿವಾಡರಿಗೆ ಮತದಾರರು ಅ ಧಿಕಾರ ಕೊಡುವ ಮೊದಲೇ ನಿವೃತ್ತಿ ಘೋಷಿಸಿದ್ದಾರೆ.

ಅನರ್ಹ ಶಾಸಕ ಆರ್‌.ಶಂಕರ್‌ಗೆ ಟಿಕೆಟ್‌ ನೀಡಿ ದರೆ ಗೆಲ್ಲುವುದು ಕಷ್ಟ ಎಂದರಿತ ಬಿಜೆಪಿ, ಅರುಣ ಕುಮಾರ ಪೂಜಾರಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿತ್ತು. ಟಿಕೆಟ್‌ ಘೋಷಣೆ ಆರಂಭದಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿ ಡಾ.ಬಸವರಾಜ ಕೇಲ ಗಾರ ಬೆಂಬಲಿಗರು ಕೆಂಡಾಮಂಡಲರಾಗಿ ತಮ್ಮ ಆಕ್ರೋಶ ಹೊರಹಾಕಿದ್ದರು.

ಅವರ ಈ ಅಸಮಾ ಧಾನ, ಆಕ್ರೋಶಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮುಲಾಮು ಸವರಿದ್ದರು. ಬಿಜೆಪಿ ಮುಖಂಡರ ಈ ಒಗ್ಗಟ್ಟಿನ ಕಾರ್ಯತಂತ್ರ 45 ವರ್ಷಗಳ ರಾಜಕೀಯ ಅನುಭವ ಹಾಗೂ 11ನೇ ಬಾರಿಗೆ ಚುನಾವಣೆ ಎದುರಿಸಿದ್ದ ಕೋಳಿವಾಡರ ಸೋಲಿಗೆ ಕಾರಣವಾಯಿತು.

Advertisement

ಕ್ಷೇತ್ರದ ಬಹುಸಂಖ್ಯಾತರಾದ ಪಂಚಮಸಾಲಿ ಸಮುದಾಯದ ಅರುಣಕುಮಾರಗೆ ಟಿಕೆಟ್‌ ನೀಡಿದ ಬಿಜೆಪಿ ಜಾತಿ ಲೆಕ್ಕಾಚಾರ ಪಕ್ಕಾ ಆಗಿದೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿ ಎಂಬ ಭಾವನೆ, ಸ್ವತಃ ಸಿಎಂ ಯಡಿಯೂರಪ್ಪ ಮೂರ್‍ನಾಲ್ಕು ಬಾರಿ ಕ್ಷೇತ್ರ ಪ್ರಚಾರ ಮಾಡಿದ್ದು, ಹಂಚಿಹೋಗಲಿದ್ದ ಮತಗಳು ಬಿಜೆಪಿಗೆ ತಿರುಗಿದವು. ಇದು ಅರುಣಕುಮಾರ ಗೆಲುವಿನ ನಗೆ ಬೀರುವಂತಾಯಿತು.

ಗೆದ್ದವರು
ಅರುಣಕುಮಾರ (ಬಿಜೆಪಿ)
ಪಡೆದ ಮತ: 95,438
ಗೆಲುವಿನ ಅಂತರ‌: 23,222

ಸೋತವರು
ಕೆ.ಬಿ.ಕೋಳಿವಾಡ (ಕಾಂಗ್ರೆಸ್‌)
ಪಡೆದ ಮತ: 72,216

ಮಂಜುನಾಥ ಹಲಗೇರಿ(ಜೆಡಿಎಸ್‌)
ಪಡೆದ ಮತ: 979

ಗೆದ್ದದ್ದು ಹೇಗೆ?
-ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಹೆಣೆದ ಕಾರ್ಯತಂತ್ರ

-ರಾಜ್ಯದಲ್ಲಿ ಬಿಜೆಪಿ ಆಡಳಿತ ಅ ಧಿಕಾರದಲ್ಲಿರುವುದರ ಪ್ರಭಾವ ಜಾತಿ ಲೆಕ್ಕಾಚಾರ

-ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕೆಂಬ ಭಾವನೆ

ಸೋತದ್ದು ಹೇಗೆ?
-ಬಿಜೆಪಿಯ ಯುವ ಅಭ್ಯರ್ಥಿಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದದ್ದು

-ಮತದಾನ ಮುನ್ನಾ ದಿನ ಐಟಿ, ಅಬಕಾರಿ ದಾಳಿಯಿಂದ ಉಂಟಾದ ಗೊಂದಲ

-ಬಿಜೆಪಿ ಜಾತಿ ಲೆಕ್ಕಾಚಾರ, ಯಡಿಯೂರಪ್ಪ ಸಿಎಂ ಆಗಿ ಮುಂದುವರಿಬೇಕೆಂಬ ಭಾವನೆ.

ಮತದಾರರು ಆಶೀರ್ವಾದ ಮಾಡಿದ್ದು, ಇದು ಪಕ್ಷದ ನಾಯಕರ ಗೆಲುವುವಾಗಿದೆ. ಪಕ್ಷದ ನಾಯಕರೆಲ್ಲ ನನ್ನ ಗೆಲುವಿಗಾಗಿ ಅತಿ ಹೆಚ್ಚು ಶ್ರಮಿಸಿದ್ದಾರೆ. ಅವರಿಗೆ ಧನ್ಯವಾದ.
-ಅರುಣ ಪೂಜಾರ, ಬಿಜೆಪಿ ಅಭ್ಯರ್ಥಿ

ಅನರ್ಹರನ್ನು ಮತದಾರರು ಅರ್ಹರನ್ನಾಗಿ ಮಾಡಿದ್ದಾರೆ. ದುಡ್ಡೆ ದೊಡ್ಡಪ್ಪ’ ಎಂಬುದು ಸಾಬೀತಾಯಿತು. ಎದುರಾಳಿ ಗೆಲುವಿನಲ್ಲಿ ದುಡ್ಡು, ಜಾತಿ ಪ್ರಮುಖ ಪಾತ್ರ ವಹಿಸಿದೆ.
-ಕೆ.ಬಿ. ಕೋಳಿವಾಡ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next