Advertisement

ಅರುಣಾಚಲ ಆರೋಗ್ಯ ಸಚಿವ ಜೋಮ್‌ಡೇ ಕೆನಾ ವಿಧಿವಶ

12:08 PM Sep 05, 2017 | udayavani editorial |

ಇಟಾನಗರ : ಅರುಣಾಚಲ ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೋಮ್‌ಡೇ ಕೆನಾ (52) ಅವರು ದೀರ್ಘ‌ಕಾಲದ ಅಸ್ವಾಸ್ಥ್ಯದ ಬಳಿಕ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರೆಂದು ಅವರು ಕುಟುಂಬ ಮೂಲಗಳು ತಿಳಿಸಿವೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಕೆನಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಕೆಳ ಸಿಯಾಂಗ್‌ ಜಿಲ್ಲೆಯ ಜೆನ್ಸಿ ಗ್ರಾಮದವರಾದ ಕೆನಾ ಅವರು ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸೋಮವಾರ ರಾತ್ರಿ ಅವರು ನಿಧನ ಹೊಂದಿದರು. 

ಲಿಕಾಬಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆನಾ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದರು. ಅನಂತರ ಇದೇ ಕ್ಷೇತ್ರದಿಂದ ಅವರು 2009 ಮತ್ತು 2014ರಲ್ಲಿ ಪುನರಾಯ್ಕೆಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next