Advertisement

ಗರ್ಭಿಣಿಗೆ ಲಿಫ್ಟ್ ಕೊಟ್ಟ ರಾಜ್ಯಪಾಲ ಮಿಶ್ರಾ

06:00 AM Dec 01, 2018 | Team Udayavani |

ಇಟಾನಗರ: ಚಿಂತಾಜನಕ ಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರಿಗೆ ತಮ್ಮ ಹೆಲಿಕಾಪ್ಟರ್‌ನಲ್ಲಿ ಲಿಫ್ಟ್ ಕೊಡುವ ಮೂಲಕ ಅರುಣಾಚಲ ಪ್ರದೇಶ ರಾಜ್ಯಪಾಲ, ನಿವೃತ್ತ ಬ್ರಿಗೇಡಿಯರ್‌ ಬಿ.ಡಿ. ಮಿಶ್ರಾ ತಮ್ಮ ಮಾನವೀಯ ಹೃದಯವನ್ನು ಅನಾವರಣ ಮಾಡಿ ದ್ದಾರೆ. ತವಾಂಗ್‌ನಿಂದ ಇಟಾನಗರಕ್ಕೆ 200 ಕಿ.ಮೀ. ದೂರವಿದ್ದು, ಕಡಿದಾದ ರಸ್ತೆಯಲ್ಲಿ ತಲುಪಲು 15 ಗಂಟೆ ಬೇಕಾಗುತ್ತದೆ. ಆದರೆ, ಕಾಪ್ಟರ್‌ನಲ್ಲಿ 2 ಗಂಟೆ ಸಾಕು. ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯಪಾಲರು ತವಾಂಗ್‌ಗೆ ಹೋಗಿದ್ದರು. ಅಲ್ಲಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ಸ್ಥಳೀಯ ಶಾಸಕರೊಬ್ಬರು ಮುಖ್ಯಮಂತ್ರಿ ಜತೆ ಮಾತನಾಡುತ್ತಿರುವುದು ರಾಜ್ಯಪಾಲರ ಕಿವಿಗೆ ಬಿತ್ತು. “ಗರ್ಭಿಣಿಯೊಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆದರೆ, ಮುಂದಿನ 3 ದಿನಗಳ ಕಾಲ ತವಾಂಗ್‌ ಮತ್ತು ಗುವಾಹಟಿ ನಡುವೆ ಕಾಪ್ಟರ್‌ ಸೇವೆ ಇರುವುದಿಲ್ಲ. ಏನು ಮಾಡೋಣ’ ಎಂದು ಶಾಸಕರು ಸಿಎಂಗೆ ಕೇಳುತ್ತಿದ್ದರು. ತಕ್ಷಣ ರಾಜ್ಯ ಪಾಲ ಮಿಶ್ರಾ ಅವರು, ತಮ್ಮ ವಾಯುಪಡೆ ಹೆಲಿ ಕಾಪ್ಟರ್‌ ನಲ್ಲಿ ಆ ಮಹಿಳೆ ಮತ್ತು ಪತಿಯನ್ನು ಕರೆದೊಯ್ಯಲು ನಿರ್ಧ ರಿಸಿದರು. ಅಲ್ಲದೆ, ಇಟಾನಗರದ ಹೆಲಿಪ್ಯಾಡ್‌ನ‌ಲ್ಲಿ ಇಳಿದೊಡನೆ ಸ್ತ್ರೀರೋಗ ತಜ್ಞೆ ಹಾಗೂ ಆ್ಯಂಬುಲೆನ್ಸ್‌ನ ವ್ಯವಸ್ಥೆಯನ್ನೂ ಮಾಡಿಕೊಟ್ಟರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next