Advertisement

ಅರುಣಾಚಲ ಸಿಎಂ ನಿವಾಸಕ್ಕೆ ದೆವ್ವದ ಕಾಟ

03:50 AM Apr 13, 2017 | Team Udayavani |

ನವದೆಹಲಿ: ದೊಡ್ಡ ಬಂಗಲೆ… ರಾತ್ರಿಯಾದರೆ ಘಲ್‌ ಘಲ್‌ ಗೆಜ್ಜೆ ಸದ್ದು.. ಕಿಟಕಿ ಬಡಿದುಕೊಳ್ಳುವುದು ಇತ್ಯಾದಿಗಳೆಲ್ಲ ಚಲನಚಿತ್ರಗಳಲ್ಲಿ ನೋಡಿರುತ್ತೀರಿ. ಆದರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಬಂಗಲೆಗೂ ಇಂಥದ್ದೇ ಒಂದು ಕಾಟ ಶುರುವಾಗಿದೆ. ಪರಿಣಾಮ ಅಲ್ಲಿನ ಮುಖ್ಯಮಂತ್ರಿಯೇ ವಾಸಕ್ಕೆ ಹಿಂಜರಿದಿದ್ದಾರೆ! ಪರಿಣಾಮ ಬಂಗಲೆಯನ್ನು ಅತಿಥಿ ಗೃಹವನ್ನಾಗಿ ಮಾಡಲಾಗಿದೆ. 

Advertisement

ಇಟಾನಗರದ ಎತ್ತರದ ಪ್ರದೇಶವೊಂದರಲ್ಲಿ 2009ರಲ್ಲಿ  60 ಕೋಟಿ ರೂ. ವೆಚ್ಚದಲ್ಲಿ ಆಗಿನ ಸಿಎಂ ದೋರ್ಜಿ ಖಂಡು ಅವಧಿಯಲ್ಲಿ ಈ ಬಂಗಲೆ ನಿರ್ಮಾಣವಾಗಿತ್ತು. ಬಳಿಕ ರಾಜ್ಯ 7 ಮಂದಿ ಸಿಎಂಗಳನ್ನು ಕಂಡಿದೆ. ಅದರಲ್ಲಿ ದೋರ್ಜಿ ಖಂಡು, ಜಾಬೊìಮ್‌ ಗಾಮ್ಲಿನ್‌ ಮೃತಪಟ್ಟಿದ್ದಾರೆ. 

ಬಳಿಕ ಸಿಎಂ ಆಗಿದ್ದ ನಬಂ ಟುಕಿ ಅದರಲ್ಲಿ ವಾಸವಿದ್ದರು ಜೊತೆಗೆ ಬಂಗಲೆ ವಾಸ್ತುದೋಷ ಪರಿಹಾರಕ್ಕೆ ತಜ್ಞರನ್ನು ಚಿಂತಿಸಿದ್ದರು. ಅವರ ಬಳಿಕ ಸಿಎಂ ಆದ ಕಲಿಖೋ ಪೌಲ್‌ ಇದೇ ಬಂಗಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗಳ ಬಳಿಕ ನೂತನವಾಗಿ ಸಿಎಂ ಆಗಿ ನಿಯುಕ್ತಿಗೊಂಡ ಪೆಮಾ ಖಂಡು ಬಂಗಲೆಗೆ ಹೋಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next