ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ 10ನೇ ಲೆಫ್ಟಿನೆಂಟ್ ಗವರ್ನರ್ ಆಗಿ ಭಾರತೀಯ ಮೂಲದ ಅರುಣಾ ಮಿಲ್ಲರ್ ಆಯ್ಕೆಯಾಗಿದ್ದಾರೆ.
ಈ ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಮೂಲದ ಮೊದಲ ಅಮೆರಿಕ ಪ್ರಜೆ ಎಂದು ಕರೆಸಿಕೊಂಡಿದ್ದಾರೆ.
58 ವರ್ಷದ ಅವರು ಈ ಹಿಂದೆ ಮೇರಿಲ್ಯಾಂಡ್ ಸದನದ ಸದಸ್ಯೆಯಾಗಿದ್ದರು. ಈಗ ರಾಜ್ಯದ 2ನೇ ಉನ್ನತ ಹುದ್ದೆಗೇರಿದ್ದಾರೆ. ಇವರಿಗಿಂತ ಮೇಲಿನ ಸ್ಥಾನದಲ್ಲಿ ಗವರ್ನರ್ ಇರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಸಂಪೂರ್ಣ ಅಧಿಕಾರವಿರುತ್ತದೆ.
ಅರುಣಾ ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಕೇವಲ 7 ವರ್ಷದ ಬಾಲಕಿಯಾಗಿದ್ದಾಗ ಅವರ ತಂದೆತಾಯಿ ಅಮೆರಿಕಕ್ಕೆ ವಲಸೆ ಬಂದರು. ಅಲ್ಲಿಯವರೆಗೆ ಅಜ್ಜಿ ಜೊತೆಗೆ ಆಂಧ್ರದಲ್ಲೇ ಇದ್ದರು!