ವಾಷಿಂಗ್ಟನ್: ಭಾರತೀಯ ಮೂಲದ ಅರುಣ ಸುಬ್ರಹ್ಮಣಿಯನ್‌ರನ್ನು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಅಮೆರಿಕದ ಸಂಸತ್ತಿನಲ್ಲಿ 58-37 ಮತಗಳಿಂದ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.
Advertisement
ಈ ಸ್ಥಾನ್ಕಕೇರಿದ ದ.ಏಷ್ಯಾ ಮೂಲದ ಮೊದಲ ವ್ಯಕ್ತಿ ಎಂಬ ಗೌರವವನ್ನು ಅರುಣ ಸಂಪಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸೆನೇಟ್ ನಾಯಕ ಚಕ್ ಶುಮರ್, ದ.ನ್ಯೂಯಾರ್ಕ್ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ದ.ಏಷ್ಯಾ ಮೂಲದ ಜನರಿದ್ದಾರೆ. ಅರುಣ ಅವರು ತಮ್ಮ ಜೀವನವನ್ನು ಜನರಿಗಾಗಿಯೇ ಅರ್ಪಿಸಿದ್ದಾರೆ. ಅವರು ಅಮೆರಿಕದ ಕನಸಿನ ಶೃಂಗವಾಗಿದ್ದಾರೆ, ಇತಿಹಾಸ ನಿರ್ಮಿಸಲಿದ್ದಾರೆ ಎಂದು ಹೇಳಿದ್ದಾರೆ.