Advertisement

ಆಕ್ಷೇಪಾರ್ಹ ಸಂದೇಶ ಪತ್ತೆಗೆ ಕೃತಕ ಬುದ್ಧಿಮತ್ತೆ

06:00 AM Dec 08, 2018 | Team Udayavani |

ನವದೆಹಲಿ: ಟ್ವಿಟರ್‌, ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ನಂತಹ ಅಪ್ಲಿಕೇಶನ್‌ಗಳು ಕೃತಕ ಬುದ್ಧಿಮತ್ತೆ ಆಧರಿತ ಪರಿಕರಗಳನ್ನು ಬಳಸಿ ಆಕ್ಷೇಪಾರ್ಹ ಸಂದೇಶ, ಚಿತ್ರಗಳು ಹಾಗೂ ವೀಡಿಯೋಗಳನ್ನು ಕಂಡುಕೊಳ್ಳಲಿವೆ ಎಂದು ಗೃಹ ಸಚಿವಾಲಯ ಹೇಳಿದೆ.

Advertisement

ಸುಳ್ಳು ಸುದ್ದಿಯನ್ನು ಹರಡುವುದು ತಿಳಿದುಬಂದರೆ ಅವರ ಹೆಸರನ್ನು ಬಹಿರಂಗಗೊಳಿಸಲಾಗುತ್ತದೆ. ಇದರನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ಯಲ್ಲಿ ಖಚಿತಪಡಿಸಲಾಗಿದೆ ಎಂದು ಸಚಿವಾಲಯ ವಿವರಣೆ ನೀಡಿದೆ. ಇತ್ತೀಚೆಗೆ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ತಂಡವು ಸಾಮಾಜಿಕ ಮಾಧ್ಯಮ ತಾಣಗಳ ಪ್ರತಿ ನಿಧಿಗಳ ಜೊತೆಗೆ ಮಾತುಕತೆ ನಡೆಸಿತ್ತು. ಆಕ್ಷೇಪಾರ್ಹ ಕಂಟೆಂಟ್‌ ಗಳನ್ನು ಕೃತಕ ಬುದ್ಧಿಮತ್ತೆ ಆಧರಿಸಿದ ಪರಿಕರಗಳು ಸ್ವಯಂ ಚಾಲಿತವಾಗಿ ಅಳಿಸಿಹಾಕಲಿವೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾ ರದ ವಿನಂತಿಗೆ ಈ ಜಾಲತಾಣಗಳು ಪ್ರತಿಕ್ರಿಯೆ ನೀಡುವ ಸಮಯ ಕೂಡ ಕಡಿಮೆಯಾಗಿದೆ. ಆದರೆ ಕೇಂದ್ರ ಸರ್ಕಾರವು ಸೂಚಿಸಿ ದಂತೆ ನಿರ್ದಿಷ್ಟ ಕಂಟೆಂಟ್‌ನ ಮೂಲವನ್ನು ಹುಡುಕಿ ಅದನ್ನು ಯಾರು ಮೊದಲು ಕಳುಹಿಸಿದ್ದಾರೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಇನ್ನೂ ಸಾಮಾಜಿಕ ಮಾಧ್ಯಮ ತಾಣಗಳು ಒಪ್ಪಿಗೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next