Advertisement
ಅರಂತೋಡು ಗ್ರಾ. ಪಂ.ವ್ಯಾಪ್ತಿಯ ಅರಮನೆಗಾಯ ಎಂಬಲ್ಲಿ ಸುಮಾರು 20ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ವಾಸವಾಗಿವೆ. ಅವರು ಪೇಟೆಗೆ ಬಂದು ಹೋಗಬೇಕಾದರೆ ಇಲ್ಲಿಯ ಬಲಾ°ಡು ಹೊಳೆಯನ್ನು ದಾಟಬೇಕು. ಬೇಸಗೆಯಲ್ಲಿ ಹೊಳೆಯನ್ನು ದಾಟಿ ಬರುತ್ತಾರೆ. ಮಳೆಗಾದಲ್ಲಿ ಅಡಿಕೆ ಮರದಿಂದ ಮಾಡಿದ ತಾತ್ಕಾಲಿಕ ಕಾಲುಸಂಕದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಡೆದಾಡುವುದು ಅನಿವಾರ್ಯವಾಗಿದೆ. ದೀರ್ಘ ಸಮಯದಿಂದ ಇಲ್ಲಿಯ ಬಲಾ°ಡ್ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿಗಳಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಆದರೆ ಈ ಮನವಿಗೆ ಈ ತನಕ ಪೂರಕವಾದ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.
Related Articles
Advertisement