Advertisement

ತಾಯ್ನಾಡಿಗಾಗಿ ಮಿಡಿದ ಅನಿವಾಸಿಯರ ಮನ

09:32 PM May 03, 2021 | Team Udayavani |

ಕೊರೊನಾದ ಎರಡನೇ ಅಲೆ ಭಾರತದಲ್ಲಿ ಕಳೆದೆರಡು ವಾರಗಳಿಂದ ಕಳವಳಕಾರಿಯಾಗಿದ್ದು, ಅದು ಅನಿವಾಸಿ ಭಾರತೀಯರನ್ನೂ ಆತಂಕಕ್ಕೆ ದೂಡಿದೆ. ಹೀಗಾಗಿ ದೇಣಿಗೆ ಸಂಗ್ರಹಿಸಲು ಮುಂದಾದ ಪ್ರಮುಖ ಸಂಘಸಂಸ್ಥೆಗಳು ಒಂದೆರಡು ದಿನಗಳಲ್ಲೇ ಹಲವಾರು ಕೋಟಿ ರೂ. ಗಳನ್ನು ಸಂಗ್ರಹಿಸಿದ್ದಲ್ಲದೆ ಸಮರೋಪಾದಿಯಲ್ಲಿ ತಮ್ಮತಮ್ಮ ಸಹಾಯ ಹಸ್ತವನ್ನು ಚಾಚುತ್ತಿವೆ.

Advertisement

ಕಳೆದ ವರ್ಷವಷ್ಟೇ ಕೋವಿಡ್‌- 19ರಿಂದ ತತ್ತರಿಸಿದಾಗ ಜಾಣತನದಿಂದ ಲಾಕ್‌ಡೌನ್‌ ಘೋಷಿಸಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದ ಕೇಂದ್ರ ಸರಕಾರ ಅನಂತರ ಅದರ ಹೊಣೆಯನ್ನು ರಾಜ್ಯ ಸರಕಾರಗಳಿಗೆ ಹಸ್ತಾಂತರಿಸಿತ್ತು. ಪರಿಸ್ಥಿತಿಯನ್ನು ಗಮನಿಸಿ ರಾಜ್ಯ ಸರಕಾರಗಳು ನಿರ್ವಹಣೆ ಯಲ್ಲಿನ ನಿರ್ಬಂಧಗಳನ್ನು  ಜನಜೀವನ ಸುಗಮ

ವಾಗಲೆಂದು ಸ್ವಲ್ಪ ಮಟ್ಟಿಗೆ ಸಡಿಲಿಸಿತ್ತು. ಅದನ್ನೇ ಅವಕಾಶವೆಂದು ಭಾವಿಸಿದ ಸಾಮಾನ್ಯ ಜನರು ಸಮಾರಂಭಗಳ ಮೇಲೆ ಸಮಾರಂಭಗಳನ್ನು ನಡೆಸಿದರು. ಮಾರುಕಟ್ಟೆಯಲ್ಲಿ ಮುಗಿಬಿದ್ದು  ಹಬ್ಬ ಹರಿದಿನಗಳನ್ನು ಆಚರಿಸಿದರು.

ಇತ್ತ ರಾಜ್ಯ, ಕೇಂದ್ರ ಸರಕಾರಗಳೂ ಚುನಾವಣೆಗಳನ್ನು ಘೋಷಿಸಿ ಸಭೆ ಸಮಾರಂಭ, ರ್ಯಾಲಿಗಳನ್ನು ನಡೆಸುತ್ತ ಮೈಮರೆತರು ಎಂದರೆ ತಪ್ಪಾಗಲಾರದು. ಮೊದಲನೇ ಅಲೆಯ ನಿರ್ವಹಣೆಯಲ್ಲಾದ ಲೋಪದೋಷಗಳಿಂದ ಕಲಿತುಕೊಂಡು ಇನ್ನುಳಿದ ದೇಶಗಳು ಪಡುತ್ತಿರುವ ಕಷ್ಟಗಳನ್ನು ನೋಡಿಕೊಂಡು ಎರಡನೇ ಅಲೆಯು ಬರುವ ಸಾಧ್ಯತೆ ಖಚಿತವಾಗಿದ್ದರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದ ಸರಕಾರ ಮತ್ತು ರಾಜ್ಯಕಾರಣಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣಿಸುತ್ತಿದೆ.

ಇದರ ಫ‌ಲಿತಾಂಶ ಎಪ್ರಿಲ್‌ ತಿಂಗಳ ಮೊದಲ ವಾರದಲ್ಲಿ  ಒಂದು ಲಕ್ಷದ ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ ಎರಡು ವಾರ ಕಳೆಯುವಷ್ಟರಲ್ಲಿ  2.60 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಜತೆಗೆ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಜನಸಂಖ್ಯೆಯಲ್ಲಿ ಭಾರತಕ್ಕೆ ಹೋಲಿಸಿದರೆ ನಿರ್ಲಕ್ಷಿಸಬಹುದಾದಂಥ ಯುಕೆ ಸರಕಾರ ಮತ್ತು ಜನರು ಈ ಹಿಂದೆ ಪಟ್ಟ ಶ್ರಮ ಮತ್ತು ಈಗ ಪಡುತ್ತಿರುವ ಕಷ್ಟಗಳನ್ನು ಗಮನಿಸಿದರೆ ಆಡಳಿತ ಯಂತ್ರಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿರುವವರಿಗೂ ಕೂಡ ಸಮಸ್ಯೆಯ ಆಳ, ಅಗಲದ ಅರಿವಾಗುತ್ತದೆ.

Advertisement

ಈ ಸಂದರ್ಭದಲ್ಲಿ ಸಾವಿರಾರು ಮೈಲಿ ದೂರ ತಾಯ್ನಾಡು, ತಮ್ಮವರನ್ನು ಬಿಟ್ಟು ಬಂದು ನೆಲೆಯಾಗಿರುವ ಪ್ರತಿಯೊಬ್ಬ ಅನಿವಾಸಿ ಭಾರತೀಯನಿಗೂ ತಮ್ಮ ಕೈಲಾದ ಸಹಾಯ ಮಾಡಬೇಕೆಂಬ ಬಯಕೆ ಮೂಡುವುದು ಸಹಜ. ಇದನ್ನು ಗಮನಿಸಿ ಯುಕೆಯಲ್ಲಿರುವ ಅಮೀತ್‌ ಕಚೂ#† ಮತ್ತು ಸತ್ಯಂ ಸಿಂಗ್‌ ಅವರು 800 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳನ್ನು ಭಾರತೀಯ ರಾಯಭಾರಿ ಕಚೇರಿಯ ಮೂಲಕ ರೆಡ್‌ಕ್ರಾಸ್‌ ಮತ್ತು ಐಎಂಆರ್‌ಸಿ ಸಂಸ್ಥೆಗಳ ಸಹಾಯದೊಂದಿಗೆ ಕೇವಲ ಮೂರು ದಿನಗಳಲ್ಲಿ ತಾವು ಸಂಗ್ರಹಿಸಿದ 4 ಕೋಟಿ ರೂ. ಗಳನ್ನು ವ್ಯಯಿಸಿ ಅವುಗಳನ್ನು ಭಾರತಕ್ಕೆ ಈ ವಾರಾಂತ್ಯಕ್ಕೆ ಕಳುಹಿಸುವ ಎಲ್ಲ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಎರಡನೇ ಹಂತದ ಯೋಜನೆಯನ್ನು ರೂಪಿಸುತ್ತಿದೆ.

ಇನ್ನೊಂದು ಪ್ರಮುಖ ಸಂಸ್ಥೆಯಾದ ಬ್ರಿಟಿಷ್‌ ಅಸೋಸಿಯೇಷನ್‌ ಆಫ್ ಫಿಜೀಶಿಯನ್ಸ್‌ ಆಫ್ ಇಂಡಿಯನ್‌ ಒರಿಜಿನ್‌ (ಬಿಎಪಿಐಒ) ಕೂಡ ಇನ್ನಿತರ ಸಂಸ್ಥೆಗಳಾದ ಅಪ್ನಾ ಎನ್‌.ಎಚ್‌.ಎಸ್‌, ಡಾಕ್ಟರ್‌ ಅಸೋಸಿಯೇಷನ್‌ ಆಫ್ ಯುಕೆ (ಡಿಎಯುಕೆ) ಮತ್ತು ಅಕ್ಷಯ ಪಾತ್ರಾ ಜತೆ ಸೇರಿಕೊಂಡು ಆಕ್ಸಿಜನ್‌ ಒದಗಿಸಿ ಕೊಡುವುದ ರೊಂದಿಗೆ ಟೆಲಿ ಎಕ್ಸ್‌ಪರ್ಟ್‌ ಕನ್ಸಲ್ಟಿಂಗ್‌ ಹಾಗೂ ಟೆಲಿ ಅಡ್ವೆ„ಸ್‌ ಫಾರ್‌ ಹೆಲ್ತ್‌ ಕೇರ್‌ ವರ್ಕರ್ಸ್‌ ಡೆಸ್ಕ್ ಮತ್ತು ಜಾಲತಾಣವನ್ನು ಸ್ಥಾಪಿಸಿ ಅಕ್ಷಯ ಪಾತ್ರಾ ಸಂಸ್ಥೆಯ ಸಹಾಯದೊಂದಿಗೆ ಕೋವಿಡ್‌ ಸೋಂಕಿತರಿಂಗೆ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಅದಾಗಲೇ ಮಾಡಲಾಗುತ್ತಿದೆ.

ಮತ್ತೂಂದು ಪ್ರಮುಖ ಸಂಸ್ಥೆಯಾದ ಸೇವಾ ಯುಕೆ ಕೂಡ ತಾನೂ ಸಂಗ್ರಹಿಸಿದ 1.6 ಕೋಟಿಗೂ ಅಧಿಕ ದೇಣಿಗೆಯನ್ನು ತನ್ನ ಮಾತೃ ಸಂಸ್ಥೆಯಾದ ಗ್ಲೋಬಲ್‌ ಸೇವಾ ಇಂಟರ್‌ ನ್ಯಾಶನಲ… ಸಂಸ್ಥೆಯೊಂದಿಗೆ ಸೇರಿಕೊಂಡು ಭಾರತವಷ್ಟೇ ಅಲ್ಲ 35ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡಿಜಿಟಲ್‌ ಹೆಲ್ಪ… ಡೆÓR… ಸ್ಥಾಪಿಸುವ ಮೂಲಕ ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿರುವುದಲ್ಲದೆ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಪೂರೈಕೆ  ಮಾಡುವುದರಲ್ಲಿಯೂ ಸಹಾಯ ಮಾಡುವುದಾಗಿ ತಿಳಿಸಿದೆ.

ಇವೆಲ್ಲದರ ಮಧ್ಯೆ ಅಕ್ಷಯ ಪಾತ್ರೆ ಸಂಸ್ಥೆಯು ದೇಣಿಗೆ ಸಂಗ್ರಹಿಸುತ್ತಿದ್ದು ಅದರಿಂದ ಭಾರತಾದ್ಯಂತ ಕೊರೊನಾ ಸೋಂಕಿತರಿಗೆ ಮತ್ತು ಅದರಿಂದ ತೊಂದರೆಗೆ ಒಳಗಾದವರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಮಾಡುತ್ತಿದೆ. ಇದರ ಜತೆಗೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಮಾಡಿ

ಕೊಂಡಿರುವ ಮನವಿ ಮೇರೆಗೆ ಪ್ರತ್ಯೇಕವಾಗಿ ಕನ್ನಡಿಗರು ಯುಕೆ ತಂಡವು ಕೂಡ ದೇಣಿಗೆ ಸಂಗ್ರಹದ ವ್ಯವಸ್ಥೆಯನ್ನು ಮಾಡಿದೆ. ಸಂಗ್ರಹ ವಾದ ದೇಣಿಗೆಯ ಹಣವನ್ನು ನೇರವಾಗಿ ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ವರ್ಗಾಯಿಸಲಾಗುವುದಲ್ಲದೆ ದೇಣಿಗೆಯ ಸಂಗ್ರಹದ ಮಾಹಿತಿಯನ್ನು ಕನ್ನಡಿಗರು ಯುಕೆ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಈಗಾ

ಗಲೇ 7 ಲಕ್ಷ ರೂ. ಗಳಿಗೂ ಅಧಿಕ ಹಣ ಸಂಗ್ರಹ ವಾಗಿದ್ದು, ಶೀಘ್ರದಲ್ಲಿ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸುವುದಾಗಿ ಕನ್ನಡಿಗರು ಯುಕೆ ತಿಳಿಸಿದೆ. ಚಾರಿಟಿ ಸಂಸ್ಥೆಯಾದ ಕನ್ನಡ ಬಳಗ ಯುಕೆ ಕೂಡ ರೋಟರಿ ಕ್ಲಬ್‌ ಬೆಂಗಳೂರು ಸಹಯೋಗದಿಂದ ಆಕ್ಸಿಜನ್‌ ಮೆಷಿನ್‌ಗಳನ್ನು ಪೂರೈಕೆಯ ಸಲುವಾಗಿ ದೇಣಿಗೆ ಸಂಗ್ರಹದ ವ್ಯವಸ್ಥೆಯನ್ನು ಮಾಡಿದೆ.

ಅಷ್ಟೇ ಅಲ್ಲದೆ, ಬ್ರಿಟನ್‌ ಸರಕಾರ ಅದಾಗಲೇ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಲ್ಲದೆ ತಮ್ಮ ಸಹಾಯ ಹಸ್ತವನ್ನು ಚಾಚುವುದರ ಮೂಲಕ ಆಕ್ಸಿಜನ್‌ ಹಾಗೂ ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಇದರೊಂದಿಗೆ ಹತ್ತು ಹಲವು ಸಂಘಸಂಸ್ಥೆಗಳು, ಹಲವಾರು ಅನಿವಾಸಿ ಭಾರತೀಯರು ತಮ್ಮ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಆದಷ್ಟು ಬೇಗ ಭಾರತ ಈ ಕೊರೊನಾದ ಕಪಿಮುಷ್ಟಿಯಿಂದ ಹೊರ ಬಂದು ಸಾವು ನೋವುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸುತ್ತಿದ್ದಾರೆ.

 

ಗೋವರ್ಧನ ಗಿರಿ ಜೋಷಿ,   ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next