Advertisement

ಕಲೆ ವೃತ್ತಿಯಾಗಿಸಿಕೊಳ್ಳಿ: ಉಮಾಶ್ರೀ

02:58 PM Feb 26, 2017 | Team Udayavani |

ಮಾದನ ಹಿಪ್ಪರಗಿ: ಹಿಂದೆ ಕಲಾವಿದರಿಗೆ ಯಾವುದೆ ತರಬೇತಿಗಳಿರಲಿಲ್ಲ. ಬದಲಾದ ಜೀವನ ಶೈಲಿಯಿಂದ ನಮ್ಮ ದೇಶಿ ಸಂಸ್ಕೃತಿ ಮರೆಯಾಗಿದೆ. ಈಗ ಸರಕಾರ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿತೊಡಗಿದೆ. ಕಾಲೇಜು ಯುವಕ-ಯುವತಿಯರು ಕಲೆಯನ್ನು ವೃತ್ತಿಯಾಗಿ ಸ್ವೀಕರಿಸುವ ಕಾಲ ಬಂದಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

Advertisement

ಫೆ.23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ 30 ಜಾನಪದ ಕಲಾವಿದರಿಗೆ 2016ನೇ ಸಾಲಿನ  ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಜನಪದ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಗ್ರಾಮೀಣ ಭಾಗದ ಕಲೆ ಗುರುತಿಸಿ ಪ್ರಸಕ್ತ ಸಾಲಿನಲ್ಲಿ 1280 ಯುವಕರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು. 

ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಮಾತನಾಡಿ, ಕಲಾವಿದರಿಗೆ ನೀಡುತ್ತಿರುವ ಗೌರವಧನ ತಾರತಮ್ಯ ಹೋಗಲಾಡಿಸಲಾಗಿದೆ. ಎಲ್ಲ ಕಲಾವಿದರಿಗೂ ಒಂದೇ ಸಂಭಾವನೆ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ಪದ್ಮಶ್ರೀ ಪ್ರಶಸ್ತಿ ಪಡೆದ ಸುಕ್ರಿ ಬೊಮ್ಮೇಗೌಡ್ರು ಮಾತನಾಡಿ, ಕಲೆ ಉಳಿಸಿ ಬೆಳೆಸುವ ಕೆಲಸ ನಡೆಯಬೇಕಾಗಿದೆ ಎಂದರು. ನಂತರ 30 ಜಾನಪದ ಕಲಾವಿದರು ಮತ್ತು ಇಬ್ಬರು ಜಾನಪದ ವಿದ್ವಾಂಸರನ್ನು ಸಚಿವೆ ಉಮಾಶ್ರೀ ಸನ್ಮಾನಿಸಿದರು. 

ಮಾದನ ಹಿಪ್ಪರಗಿ ಗ್ರಾಮದ ಶಕುಂತಲಾ ಕಲ್ಲಪ್ಪ ಭೂಸನೂರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ಎಸ್‌.ಪಿ. ಸುಳ್ಳದ, ದಲಿತ ಮುಖಂಡ ಬಸಣ್ಣ ಸಿಂಗೆ, ಬೋಧಿಸತ್ವ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಬಾಬುರಾವ ಸುಳ್ಳದ ಕಾರ್ಯದರ್ಶಿ ಮಿಲಿಂದ ಸುಳ್ಳದ ಹರ್ಷ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next