Advertisement
ಜು. 21ರಂದು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಾವರ್ಕರ್ ನಗರ ಥಾಣೆ ವತಿಯಿಂದ ನವೋದಯ ಕನ್ನಡ ಸಂಘ ಸಂಚಾಲಿತ ನವೋದಯ ಜೂನಿಯರ್ ಕಾಲೇಜು ಸಭಾಗೃಹ ಮುಲುಂಡ್ ಚೆಕ್‌ನಾಕಾ ಇಲ್ಲಿ ಆಯೋಜಿಸಿದ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ ಕುಂದಾಪುರ ಇವರು ಪ್ರದರ್ಶಿಸಿದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಯಕ್ಷಗಾನ ಕಥಾನಕ ಪ್ರದರ್ಶನದ ಮಧ್ಯೆ ಜರಗಿದ ಕಿರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿ ಶುಭ ಹಾರೈಸಿದರು.
Related Articles
Advertisement
ಅತಿಥಿ ಸ್ಥಾನದಿಂದ ಬಿಲ್ಲವರ ಅಸೋಸಿ ಯೇಷನ್ ಥಾಣೆ ಸ್ಥಳೀಯ ಕಛೇರಿ ಇದರ ಗೌರವಾಧ್ಯಕ್ಷರಾದ ಅನಂತ್ ಡಿ. ಸಾಲ್ಯಾನ್ ಮಾತನಾಡಿ, ಶಿವಪ್ರಸಾದ್ ಪುತ್ತೂರು ಅವರು ಜಾತಿ ಭೇದ ಮರೆತು ಧಾರ್ಮಿಕ ಸೇವೆಯೊಂದಿಗೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದರ ಜತೆಗೆ ಇದೀಗ ಯಕ್ಷಸೇವೆಯ ಮುಖೇನ ಕಲಾ ಪೋಷಕರಾಗಿ ಗುರುತಿಸಿಕೊಂಡಿದ್ದು ಅಭಿನಂದನೀಯ. ಭಗವಂತ ಅವರಿಗೆ ಇನ್ನಷ್ಟು ಶ್ರೇಯಸ್ಸನ್ನು ಕರುಣಿಸಲಿ ಎಂದು ಆಶಿಸಿದರು.
ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇದರ ಸಂಚಾಲಕರಾದ ಮೊಹಮ್ಮದ್ ಗೌಸ್ ಮಾತನಾಡಿದರು. ಸಭಾ ಕಾರ್ಯಕ್ರಮದ ಮಧ್ಯೆ ಮೇಳದ ನಾಮಾಂಕಿತ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಭಾಗವತರಾದ ಸುರೇಶ್ ಶೆಟ್ಟಿ ಶಂಕರ ನಾರಾಯಣ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಪುಷ್ಪಗುಚ್ಛವನ್ನಿತ್ತು ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ ಸಲಹೆಗಾರರು ಹಾಗೂ ಪುರೋಹಿತರಾದ ಜಗದೀಶ್ ತಂತ್ರಿ, ಶ್ರೀ ಅಯ್ಯಪ್ಪ ಮಂದಿರ ವರ್ತಕ್ ನಗರ ಇದರ ರಾಧಾಕೃಷ್ಣ ಗುರುಸ್ವಾಮಿ, ಉದ್ಯಮಿ ಹಾಗೂ ಕಲಾಪೋಷಕರಾದ ಸುಧಾಕರ್ ಶೆಟ್ಟಿ ವಿರಾರ್, ಪ್ರವೀಣ್ ಶೆಟ್ಟಿ ನಾವುಂದ, ಸಾಹಿತಿ ಕಲಾಪ್ರೇಮಿ ಸಿ. ಎ. ಪೂಜಾರಿ ಥಾಣೆ, ಆಜ್‌ತಕ್ ಇಂಡಿಯಾ ಟುಡೇ ಸುದ್ದಿ ವಾಹಿನಿಯ ಅಶ್ವಿನ್ ಅಮೀನ್, ಫ್ಯಾಶನ್ ಕೊರಿಯೋಗ್ರಾಫರ್ ಸನ್ನಿಧ್ ಪೂಜಾರಿ, ಸಾಮಾಜಿಕ ಕಾರ್ಯಕರ್ತೆ ಸೋನಿಯಾ ಗಿಲ್, ಯಕ್ಷಸೌರಭ ಪ್ರವಾಸಿ ಮೇಳದ ಮುಂಬಯಿ ಸಂಚಾಲಕರಾದ ನಾಗರಾಜ್ ಪೂಜಾರಿ ಅಪ್ಪೇಡಿ ಹೆರಂಜಾಲು, ಉಪಸ್ಥಿತರಿದ್ದರು.
ಅಥಿತಿ ಗಣ್ಯರನ್ನು ಶಿವಪ್ರಸಾದ್ ಪೂಜಾರಿ ಪುತ್ತೂರು ಮತ್ತು ಆಶಾಲತಾ ಶಿವಪ್ರಸಾದ್ ಅವರು ಗೌರವಿಸಿದರು. ಕಾರ್ಯಕ್ರಮಕ್ಕೆ ಸಹಕಾರವನ್ನಿತ್ತ ಗಣ್ಯರಿಗೆ ಪುಷ್ಪಗುಚ್ಛವನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದ ಶ್ರೇಯಸ್ಸಿಗೆ ಮಾಧವ ಪಡೀಲ್, ಸಂಘಟಕ ಪ್ರಭಾಕರ್ ಬೆಳುವಾಯಿ, ವಿಶ್ವನಾಥ್ ಶೆಟ್ಟಿ ಪೇತ್ರಿ, ಜಗದೀಶ್ ಕೇಮಾರು, ಪ್ರಸನ್ನ ಶೆಟ್ಟಿ ಕುಂಟಾಡಿ, ಜಯ ಪೂಜಾರಿ ಥಾಣೆ, ಯೋಗೇಶ್ ಪೂಜಾರಿ ಕಡಂದಲೆ, ಪುರುಷೋತ್ತಮ್ ಬಂಟ್ವಾಳ್, ಯುವರಾಜ್ ಶೆಟ್ಟಿ ಹೆರಂಜೆ, ರಾಜೇಶ್ ಶೆಟ್ಟಿ ಥಾಣೆ, ಸತೀಶ್ ಪೂಜಾರಿ ಹೀರೆ ಬಂಡಾಡಿ, ವಸಂತ್ ಕುಂದರ್, ರಾಧಾಕೃಷ್ಣ ಶೆಟ್ಟಿ, ಜಯಂತ್ ಮುಟ್ಟ, ಪ್ರೀತಿಕಾ ಶೆಟ್ಟಿ ಮೊದಲಾದವರು ಸಹಕರಿಸಿದರು. ಸಭಾ ಕಾರ್ಯಕ್ರಮವನ್ನು ರಂಗನಟ ಕಲಾಸಂಘಟಕ ಭಾಸ್ಕರ್ ಸುವರ್ಣ ಸಸಿಹಿತ್ಲು ನಿರೂಪಿಸಿ ವಂದಿಸಿದರು.