Advertisement

ಕರ್ನಾಟಕ ಕಲಾ ದರ್ಶಿನಿಯಿಂದ ‘ಕಲಾ ಉತ್ಸವ-2022’

04:20 PM Jul 23, 2022 | Team Udayavani |

ಬೆಂಗಳೂರು: ಕರ್ನಾಟಕ ಕಲಾ ದರ್ಶಿನಿ ಸಂಸ್ಥೆಯಿಂದ ‘ಕಲಾ ಉತ್ಸವ-2022’ ಕಾರ್ಯಕ್ರಮ ಇತ್ತೀಚೆಗೆ ಉದಯಬಾನು ಕಲಾ ಸಂಘದಲ್ಲಿ ನಡೆಯಿತು.

Advertisement

ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಎಂ. ಆರ್ ಸತ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸರಾದ ಡಾ| ಆನಂದರಾಮ ಉಪಾಧ್ಯಾಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಮೇಶ್ ಬೇಗಾರ್, ಯಕ್ಷಗಾನ ಕಲಾವಿದರಾದ ಮಟ್ಟಿ ರಾಮಚಂದ್ರ ರಾವ್ ಉಪಸ್ಥಿತರಿದ್ದರು.

ಕರ್ನಾಟಕ ಕಲಾ ದರ್ಶಿನಿ ತಂಡದ ಸ್ಥಾಪಕರಾದ ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಸ್ವಾಗತಿಸಿ, ಚೈತ್ರ ರಾಜೇಶ್ ಕೋಟ ಮತ್ತು ಸುಪ್ರೀತಾ ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಕ್ಷಗಾನ ರಸಪ್ರಶ್ನೆ, ಕಲಾ ಕುಟೀರ ಹಾಗೂ ವೇದಾಂತ ಮಾಲಾ ಕಲಾ ಕುಟೀರ ಕಲಾವಿದರಿಂದ ಭರತನಾಟ್ಯ, ಇಂಪಿನ ಗುಂಪು ಕಲಾವಿದರಿಂದ ಸುಗಮ ಸಂಗೀತ, ಡಾ | ಸುಪ್ರೀತ ಗೌತಮ್ ತಂಡದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ, ಪ್ರಸಿದ್ದ ಕಲಾವಿದರಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರಸಂಗ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next